ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ಗುರುವಾರ, ಮಾರ್ಚ್ 9ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸರಣಿ ನಿರ್ಣಾಯಕ ಪಂದ್ಯದ ಮೊದಲ ದಿನದಂದು ವಿಶೇಷ ವೀಕ್ಷಕರಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಆಗಮಿಸಲಿದ್ದಾರೆ.
ಮಾರ್ಚ್ 9ರಂದು ಟಾಸ್‌ನಲ್ಲಿ ಕಾಣಿಸಿಕೊಂಡ ನಂತರ, ಉಭಯ ತಂಡಗಳ ಆಟಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಎರಡೂ ದೇಶಗಳ ಪ್ರಧಾನಿಗಳು ಕೆಲವು ಗಂಟೆಗಳ ಆಟವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಹೀಗಾಗಿ, ವಿಶೇಷ ದಿನದ ಅಂಗವಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಕ್ರೀಡಾಂಗಣದ ಸಂಕೀರ್ಣವು ಇಬ್ಬರು ನಾಯಕರ ಬೃಹತ್ ಹೋರ್ಡಿಂಗ್‌ಗಳಿಂದ ತುಂಬಿದೆ, “ಕ್ರಿಕೆಟ್ ಮೂಲಕ 75 ವರ್ಷಗಳ ಸ್ನೇಹ’ ಎಂಬ ಶೀರ್ಷಿಕೆ ನೀಡಲಾಗಿದೆ.