ಬಾಗಲಕೋಟೆ: ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕ ಸಿದ್ದು ಸವದಿ ಮೊದಲ ದಿನವಾದ ಗುರುವಾರ ಮೊದಲಿಗರಾಗಿ ನಾಮಪತ್ರ ಸಲ್ಲಿಸಿದರು.
ರಬಕವಿ-ಬನಹಟ್ಟಿಯ ತಹಶೀಲ್ದಾರ್ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕನೇ ಬಾರಿ ವಿಧಾನಸೌಧ ಪ್ರವೇಶಿಸಲು ನಾಮಪತ್ರ ಸಲ್ಲಿಸುತ್ತಿದ್ದು ಅತ್ಯಧಿಕ ಬಹುಮತದಿಂದ ಗೆಲ್ಲುವ ವಿಶ್ವಾಸ ನನಗಿದೆ ಎಂದರು.
ತೇರದಾಳ ಕ್ಷೇತ್ರದ ಜನತೆಗೂ ನನಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನು ಕಡೆಗಣಿಸಲು ಯಾವ ಶಕ್ತಿಗೂ ಸಹ ಸಾಧ್ಯವಿಲ್ಲ. ತೇರದಾಳ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ 20 ವರ್ಷಗಳಿಂದ ಸ್ಥಳೀಯನಾಗಿಯೇ ಇದ್ದೇನೆ. ನೇಕಾರರ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಗೆಲುವು ನನ್ನದಾಗಿದೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಕೊಣ್ಣೂರ, ಪುಂಡಲೀಕ ಪಾಲಭಾಂವಿ, ರಮೇಶ ಎಕ್ಸಂಬಿ, ಬಸವಪ್ರಭು ಹಟ್ಟಿ ಇದ್ದರು.