ನಾನು ಸ್ಪರ್ಧೆ ಮಾಡೋದು ಶತಸಿದ್ಧ

ಶೆಟ್ಟರ್‌
Advertisement

ಹುಬ್ಬಳ್ಳಿ: ರಾಜಕಾರಣದಲ್ಲಿ ಯಾವಾಗ ಏನ್ ಆಗುತ್ತೋ ಗೊತ್ತಿಲ್ಲ. ರಾಜಕೀಯದಲ್ಲಿ ಬಹಳಷ್ಟು ತಾಳ್ಮೆ ಇರಬೇಕು. ಅವಸರ‌ ಮಾಡಿದ್ರೆ ಆಕ್ಸಿಡೆಂಟ್ ಆಗುತ್ತೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದ್ದಾರೆ.
ಟಿಕೆಟ್ ತಪ್ಪಿಸಿದವರ ವಿರುದ್ಧ ಪರೋಕ್ಷವಾಗಿ ಮಾತನಾಡಿದ ಅವರು, ನನಗೂ ಸಮಯ ಬರುತ್ತದೆ. ಆಗ ಎಲ್ಲವನ್ನೂ ಮಾತನಾಡುತ್ತೇನೆ. ಈಗಾಗಲೇ ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ನಾನು ಟಿಕೆಟ್‌ಗಾಗಿ‌ ಎಲ್ಲಿ ಹೋಗುವುದಿಲ್ಲ, ಯಾರ ಜೊತೆಗೆ ಮಾತನಾಡಲ್ಲ. ಈಶ್ವರಪ್ಪ ಅವರ ವಿಚಾರವೇ ಬೇರೆ ನನ್ನ ವಿಚಾರವೇ ಬೇರೆ. ಜನ ಸಂಘದ ಕಾಲದಿಂದ ನಮ್ಮ ಕುಟುಂಬ ಬಿಜೆಪಿಯಲ್ಲಿದೆ. ಇಂತಹ ಕುಟುಂಬಕ್ಕೆ ಅನ್ಯಾಯ ಆಗಲ್ಲಾ ಅನ್ನೋ ಭರವಸೆಯೂ ನನಗಿದೆ.
ಬೇರೆಯವರಿಗೆ ಅವಕಾಶ ಕೊಡಿ ಅಂತಾ ಹೇಳಿದ್ರು, ಬೇರೆ ಯಾರು ಅನ್ನೋ ಬಗ್ಗೆ ಹೆಸರು ಹೇಳಲಿಲ್ಲ. ಜನರ ಆಶೀರ್ವಾದವಿದೆ, ನಾನು ಸ್ಪರ್ಧಿಸುತ್ತೇನೆ. ನಿನ್ನೆಮೊನ್ನೆಯಷ್ಟೆ ಟಿಕೆಟ್ ಕನ್ಫರ್ಮ್ ಆಗಿದೆ ಅಂತಾ ಹೈಕಮಾಂಡ್ ಹೇಳಿತ್ತು. ಆದರೆ, ಇವತ್ತು ಟಿಕೆಟ್ ಡಿನೈ ಮಾಡಿದ್ದಾರೆ. ಈಗಾಗಲೇ ಕ್ಯಾಂಪೇನ್ ಶುರು ಮಾಡಿದ್ದೇನೆ. ಜನ ಪ್ರೀತಿ, ಗೌರವ ತೋರಿಸ್ತಿದ್ದಾರೆ ನಾನು ಸ್ಪರ್ಧೆ ಮಾಡೋದು ಶತಸಿದ್ಧ ಎಂದರು.