ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಯಾರ ಪರವೂ ಅಲ್ಲ

ಸುದೀಪ್‌
Advertisement

ನಾನು ಯಾವ ಪಕ್ಷದಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾರ ಪರವಾಗಿ ಟಿಕೆಟ್ ಕೇಳುವುದೂ ಇಲ್ಲ, ಟಿಕೆಟ್ ಕೊಡಿಸುವಷ್ಟು ದೊಡ್ಡವನು ನಾನಲ್ಲ, ಟಿಕೆಟ್‌ ಕೇಳಿದರೆ ಸಿನಿಮಾ ನೋಡಲು ಟಿಕೆಟ್ ಕೊಡಿಸಬಹುದು ಅಷ್ಟೆ, ಸಿಎಂ ಬೊಮ್ಮಾಯಿಯವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸತ್ಯ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಮುಂದೆ ಸಿಎಂ ಬೊಮ್ಮಾಯಿಯವರ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸುವ ವೇಳೆ ಅವರು ಮಾತನಾಡಿದರು. ನಾನು ಸುದ್ದಿಗೋಷ್ಠಿಯಲ್ಲಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ, ಈಗಲೇ ಎಲ್ಲದಕ್ಕೂ ಉತ್ತರ ನೀಡುವುದಕ್ಕೆ ಆಗುವುದಿಲ್ಲ ಎಂದರು.
ಅನಾಮಧೇಯ ಬೆದರಿಕೆ ಪತ್ರದ ಬಗೆಗೂ ತನಿಖೆ ನಡೆಯುತ್ತಿದೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದನ್ನು ಸಿಸಿಬಿಗೆ ವರ್ಗಾಯಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ. ಕಾನೂನು ಕ್ರಮ ತೆಗೆದುಕೊಳ್ಳುವುದು ನಿಶ್ಚಿತ. ಏಕೆಂದರೆ ಮುಂದೆ ಬೇರೆಯವರಿಗೂ ಹೀಗೆ ಮಾಡಬಾರದಲ್ಲ ಅದಕ್ಕಾಗಿ ಎಂದರು.