ನಾನು ಆರೋಗ್ಯವಾಗಿದ್ದೇನೆ: ಎಚ್ಡಿಕೆ

Advertisement

ಕೋಲಾರ: ನನಗೆ ಜ್ವರ ಬಂದಿದೆಯೆಂದು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನಾನು ಆರೋಗ್ಯವಾಗಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶಿವಾರ ಪಟ್ಡಣದಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಬೆಂಗಳೂರಿನಿಂದ ಕರೆ ಮಾಡಿ ಸ್ಪಷ್ಟನೆ ಕೊಡಿ ಅಂತಿದ್ದಾರೆ. ಪಂಚರತ್ನ ರಥಯಾತ್ರೆ ೧೦೦ ದಿನಗಳು ನಡೆಸುತ್ತೇನೆ. ನನಗೆ ಜ್ವರ ಬಂದಿಲ್ಲ ಆರೋಗ್ಯವಾಗಿದ್ದೇನೆ, ನಿಮ್ಮ ಆಶೀರ್ವಾದಿಂದ ಯಾವುದೇ ಸಮಸ್ಯೆ ಎದುರಾಗಲ್ಲ, ಇಡೀ ರಾಜ್ಯದಲ್ಲಿ ೧೦೦ ದಿನಗಳ ಕಾಲ ನಾನು ನನ್ನ ಕನಸ್ಸಿನ ಪಂಚರತ್ನ ರಥಯಾತ್ರೆ ಯೋಜನೆಗಳನ್ನ ರಾಜ್ಯದಲ್ಲಿ ತರೋದಕ್ಕೆ ರಾಜ್ಯದ ೬.೫ ಕೋಟಿ ಜನರ ಆಶೀರ್ವಾದ ಪಡೆಯುಲಿಕ್ಕೆ ಎಂತಹ ಸಮಸ್ಯೆಗಳಿದ್ದರೂ ಈ ನೂರು ದಿನಗಳ ಪ್ರವಾಸ ನಿಲ್ಲೋದಿಲ್ಲ, ಇಂತಹ ಅಪಪ್ರಚಾರಕ್ಕೆ ಯಾರು ಸಹ ಕಿವಿಕೊಡಬೇಡಿ ಎಂದರು.