ನವದೆಹಲಿ : ಹುಬ್ಬಳ್ಳಿ – ಧಾರವಾಡ ಮಹಾನಗರ ಹಾಗೂ ಸುತ್ತಲಿನ ಜಿಲ್ಲೆಗಳ ನಗರ ಜನರಿಗೆ ಸಿಹಿ ಸುದ್ಧಿ. ನವೆಂಬರ್ 14ರಿಂದ ಹುಬ್ಬಳ್ಳಿ – ದೆಹಲಿ ನಡುವೆ ವಿಮಾನಯಾನ ಆರಂಭವಾಗಲಿದೆ.
ಇಂಡಿಗೋ ಏರ್ಲೈಾನ್ಸ್ ನ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಇಂಡಿಗೋ ಏರ್ಲೈಾನ್ಸ್ ಅಧಿಕಾರಿಗಳು ಪ್ರತಿದಿನ ದೆಹಲಿ-ಹುಬ್ಬಳ್ಳಿ, ಹಾಗೂ ಹುಬ್ಬಳ್ಳಿ-ದೆಹಲಿ ನಡುವೆ ವಿಮಾನಯಾನ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನ ಸೌಲಭ್ಯ ಲಭಿಸಲಿದೆ ಎಂದು ತಿಳಿಸಿದ್ದಾರೆ.
ಇಂಡಿಗೋ ವಿಮಾನ ಪ್ರತಿದಿನ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ( ವಿಮಾನ ಸಂಖ್ಯೆ 6ಇ 5625) ಬೆಳಿಗ್ಗೆ 10 ಕ್ಕೆ ಹೊರಟು ಹುಬ್ಬಳ್ಳಿಯನ್ನು 12-45 ಕ್ಕೆ ತಲುಪುವುದು. ಮರಳಿ ಮಧ್ಯಾಹ್ನ 1-15 ಕ್ಕೆ ಹುಬ್ಬಳ್ಳಿಯಿಂದ ಹೊರಟು 3-45ಕ್ಕೆ ದೆಹಲಿ ತಲುಪಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು, ಈ ವಿಮಾನ ಸೌಲಭ್ಯ ದೊರೆಯುತ್ತಿರುವುದು ಸಂತಸಕರ ಸಂಗತಿ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಈ
Home ತಾಜಾ ಸುದ್ದಿ ನವೆಂಬರ್ 14ರಿಂದ ದೆಹಲಿ-ಹುಬ್ಬಳ್ಳಿ, ಹುಬ್ಬಳ್ಳಿ- ದೆಹಲಿ ಇಂಡಿಗೋ ವಿಮಾನ ಆರಂಭ : ಕೇಂದ್ರ ಸಚಿವ ಜೋಶಿ