ನವಲಗುಂದ, ಅಣ್ಣಿಗೇರಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು ರಜೆ

Advertisement

ಧಾರವಾಡ: ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಬರುತ್ತಿವೆ ಮುಂಜಾಗ್ರತಾ ಕ್ರಮವಾಗಿ ,ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲೆ ಕಾಲೇಜುಗಳಿಗೆ ಇಂದು ಸೆ.6 ರಂದು ಒಂದು ದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ರಜೆ ಘೋಷಿಸಿದ್ದಾರೆ.

ರೈತರು,ಸಾರ್ವಜನಿಕರು ಹಳ್ಳ,ಕೊಳ್ಳಗಳನ್ನು ದಾಟುವ ಸಾಹಸಗಳಿಗೆ ಕೈ ಹಾಕಬಾರದು.ಜಾನುವಾರುಗಳ ಸುರಕ್ಷತೆಗೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ