ನವಜಾತ ಶಿಶು ಪತ್ತೆ

Advertisement

ಬೆಳಗಾವಿ: ನಿಪ್ಪಾಣಿ ಹೊರವಲಯದಲ್ಲಿ ಗುರುವಾರ ಮುಂಜಾನೆ ನವಜಾತ ಶಿಶುವೊಂದು ಉಪೇಕ್ಷಿಸಿರುವುದು ಪತ್ತೆಯಾಗಿದೆ. ಅನೈತಿಕ ಸಂಬಂಧದಲ್ಲಿ ಹುಟ್ಟಿದ ಮಗುವನ್ನು ಪೋಷಕರೇ ಎಸೆದಿರುವ ಶಂಕೆ ಇದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ. ಮಕ್ಕಳ ರಕ್ಷಣಾ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.