ನಮ್ಮ ಕೆಲಸಗಳೇ ಗ್ಯಾರಂಟಿ

ಇಳಕಲ್
Advertisement

ಬಾಗಲಕೋಟೆ(ಇಳಕಲ್): ಕಾಂಗ್ರೆಸ್ ಪಕ್ಷದವರ ಹಾಗೇ ನಾವು ಯಾವುದೇ ಗ್ಯಾರಂಟಿ ಕಾರ್ಡ್‌ ಕೊಡುವುದಿಲ್ಲ ನಮ್ಮ ಅವಧಿಯಲ್ಲಿ ನಾವು ಮಾಡಿದ ಕೆಲಸಗಳೇ ನಮ್ಮ ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ವೀರಮಣಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟೀಕಿಸಿದ ಅವರು ಯಾವುದೇ ಧರ್ಮ ಜಾತಿ ಮತ ಎಣಿಸಿ ಅಧಿಕಾರ ಮಾಡಿಲ್ಲ. ಹಲವಾರು ಏತ ನೀರಾವರಿ ಯೋಜನೆಗಳ ಜಾರಿ ಮಾಡಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಯಡಿ ಪ್ರತಿಶತ 30ರಷ್ಟು ಅಲ್ಪಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗಿದೆ. ವಿದ್ಯಾನಿಧಿ ಯೋಜನೆಯಿಂದ ವಿದ್ಯಾರ್ಥಿನಿಯರಿಗೆ, ಉಚಿತ ಬಸ್ ಪಾಸ್ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.