ಮಂಗಳೂರು: ಈಗಾಗಲೇ ನಮ್ಮ ಸಮಾಜದವರು ಸಾಕಷ್ಟು ಜನ ತಮ್ಮ ಅಶ್ಮಿತೆಗಾಗಿ ವಿದೇಶದಲ್ಲಿ ನೆಲೆಸಿದ್ದು, ಸರ್ಕಾರದಿಂದ ನಮಗೆ ಬರಬೇಕಾದ ಸೌಕರ್ಯಗಳನ್ನು ಕೇಳಿ ಪಡೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವುಗಳೆಲ್ಲ ವಿದೇಶದಲ್ಲಿ ಹೋಗಿ ನೆಲೆಸಬೇಕಾದ ಅನಿವಾರ್ಯ ಬರಬಹುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಬೋಳೂರು ಗ್ರಾಮದ ದ್ರಾವಿಡ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಶತಮಾನೋತ್ಸವ ವರ್ಷಾಚರಣೆ ಸಂಭ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ ಅನೇಕ ಒಳ ಪಂಗಡಗಳಿದ್ದು, ನಾವುಗಳು ರಾಜ್ಯ ಮಟ್ಟದಲ್ಲಿ ಒಂದಾಗಿ ಧ್ವನಿಯಾಗಬೇಕು. ಎಲ್ಲರೂ ಒಂದೇ ಧ್ವನಿಯಲ್ಲಿ ರಾಜಕೀಯ ಹಾಗೂ ಸಾಮಾಜಿಕ ಅಶ್ಮಿತೆಗಾಗಿ ನಾವುಗಳು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು. ಉಡುಪಿ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ವಿಶ್ವಹಿಂದೂ ಪರಿಷತ್ ಪ್ರಾಂತೀಯ ಅಧ್ಯಕ್ಷ ಡಾ.ಎಂ.ಬಿ ಪುರಾಣಿಕ್ ಮಾತನಾಡಿದರು.ಉದ್ಯಮಿ ಬಿ. ರಘುನಾಥ ಸೋಮಯಾಜಿ, ಡಾ.ರಮಾನಂದ ರಾವ್, ಶತಮಾನೊತ್ಸವ ಸಮಿತಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್, ಗೌರವಾಧ್ಯಕ್ಷ ಬಿ.ರಾಘವೇಂದ್ರ ರಾವ್,ಸಂಘದ ಅಧ್ಯಕ್ಷ ಸುಮಂತ್ ಕುಮಾರ್, ಕಾರ್ತಿಕ್ ಬಾಪಟ್, ನೇರಂಬಳ್ಳಿ ಡಾ.ಭಾಸ್ಕರ ಆಚಾರ್ಯ, ಸಿ.ಸುರೇಶ್ ರಾವ್, ವೆಂಕಟೇಶ್ ಬಿ., ಪಿ.ಪ್ರಕಾಶ್ ರಾವ್ ಉಪಸ್ಥಿತರಿದ್ದರು.