ನನ್ನ ಫೋಟೋ ಕೂಡಾ ಪೊಲೀಸ್‌ ಸ್ಟೇಷನ್‌ನಲ್ಲಿತ್ತು..

C T RAVI
Advertisement

ಬೆಂಗಳೂರು: ಬಿಜೆಪಿ ಮಾಸ್ ಪಾರ್ಟಿ ಆಗಿರುವಾಗ ಪ್ರವಾಹದ ಜತೆ ಕಸ ಕಡ್ಡಿ ಬಂದ ಹಾಗೆ ಎಲ್ಲರೂ ಬರ್ತಾರೆ. ನಂತರ ಫಿಲ್ಟರ್ ಆಗುತ್ತದೆ‌. ನಮ್ಮ ನೀತಿ ನಿಯತ್ತು ಬದಲಾಯಿಸಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌. ರವಿ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 90ರ ದಶಕದಲ್ಲಿ ಪೊಲೀಸರು ನನ್ನನ್ನೂ ಸಮಾಜಘಾತುಕರ ಪಟ್ಟಿಗೆ ಸೇರಿಸಿದ್ದರು. ನನ್ನ ಫೋಟೋ ಕೂಡಾ ಪೊಲೀಸ್ ಠಾಣೆಯಲ್ಲಿ ಹಾಕಿದ್ರು. ಆದರೆ, ʻನಾನು ರಾಜಕೀಯ ಕಾರ್ಯಕರ್ತ. ನನ್ನ ಫೋಟೋ ಪೊಲೀಸ್ ಠಾಣೆಯಲ್ಲಿ ಏಕೆ ಹಾಕ್ತೀರಿ? ಪೋಸ್ಟರ್ ಮಾಡಿ ಹಂಚಿ ಎಂದು ಹೇಳಿದ್ದೆ’ ಪಕ್ಷದ ತಂತ್ರಗಾರಿಕೆ ಬದಲಾಗುತ್ತದೆಯೇ ಹೊರತು ನೀತಿ-ನಿಯತ್ತು ಬದಲಾಗದು. ರೌಡಿಗಳ ಸೇರ್ಪಡೆಗೆ ಅವಕಾಶವಿಲ್ಲ ಎಂಬ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯನ್ನೇ ಪುನರುಚ್ಛರಿಸುವೆ ಎಂದರು.