ನಟ ಶಶಿಕುಮಾರ್ ಬಿಜೆಪಿಗೆ ಸೇರ್ಪಡೆ

ಶಶಿಕುಮಾರ
Advertisement

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಚಲನಚಿತ್ರ ನಟ ಹಾಗೂ ಮಾಜಿ ಸಂಸದ ಶಶಿಕುಮಾರ್, ಮಾಜಿ ಐಎಎಸ್ ಅಧಿಕಾರಿ ಬಿ. ಎಚ್. ಅನಿಲ್ ಕುಮಾರ್, ಸೇವಾದಳದ ರಾಜ್ಯ ಉಪಾಧ್ಯಕ್ಷ ಹನುಮಂತರಾವ್ ಜವಳಿ, ರಮೇಶ ಮುನಿಯಪ್ಪ, ಜಿ. ವೆಂಕಟಾಚಲಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ಅವರಿಗೆ ಪಕ್ಚದ ರಾಜ್ಯ ಅಧ್ಯಕ್ಷರಾದ ನಳಿನ ಕುಮಾರ ಕಟೀಲ ಅವರು ಪಕ್ಷದ ದ್ವಜ ನೀಡಿ ಸ್ವಾಗತಿಸಿದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಕಾರಣದಲ್ಲಿ ಈಗ ಸಮೀಕರಣ ಆಗುತ್ತಿದೆ. ಧ್ರುವೀಕರಣ ಎಂದರೆ ಎರಡು ದಿಕ್ಕುಗಳಿಗೆ ಸೇರುವುದು. ಈಗ ಇನ್ನೊಂದು ದಿಕ್ಕು ಇಲ್ಲ. ಇರುವುದು ಬಿಜೆಪಿ ಮಾತ್ರ. ಗುರುತ್ವಾಕರ್ಷಣೆ ಬಲ ಇರುವ ಬಿಜೆಪಿಯತ್ತ ಎಲ್ಲರೂ ಸೇರುತ್ತಿದ್ದಾರೆ ಎಂದರು. ಪಕ್ಷವನ್ನು ಸೇರಿದ ಎಲ್ಲರನ್ನೂ ಸಮಾನ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ನೋಡೊಕೊಳ್ಳುತ್ತೇವೆ. ಪಕ್ಷದಲ್ಲಿ ಸ್ಥಾನಮಾನವನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಅನ್ನು ಸಂಸದೀಯ ಮಂಡಳಿ ತೀರ್ಮಾನ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.