ನಕಲಿ ಅನುಕಂಪದ ನೌಕರಿ ಪ್ರಕರಣ ಬೆಳಕಿಗೆ

Advertisement

ಚಿತ್ರದುರ್ಗ: ಪಿಎಸ್‌ಐ ನೇಮಕಾತಿ ಹಗರಣವನ್ನು ಮೀರಿಸುವಂತಹ ಮತ್ತೊಂದು ಹಗರಣವನ್ನು ಚಿತ್ರದುರ್ಗ ಕೋಟೆ ಪೊಲೀಸರು ಬೆಳಕಿಗೆ ತಂದಿದ್ದಾರೆ.
ಯಾರೋ ಸತ್ತಿರುವಂತೆ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ನಾಲ್ವರು ನಕಲಿ ಅಧಿಕಾರಿಗಳು, ಇದಕ್ಕೆ ಸಹಕಾರ ಮಾಡಿದ ಸೂಪರಿಡೆಂಟ್ ಇಂಜಿನಿಯರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಫೈಜಾನ್ ಮುಜಾಹಿದ್ (ನಕಲಿ ಅನುಕಂಪ ಆಧಾರಿತ ಮಾರ್ಗದಾಳು ಹುದ್ದೆಗೆ ಅರ್ಜಿ ಸಲ್ಲಿಸಿದವನು), ಎಲ್ ರವಿ. ಸಹಾಯಕ ಬೆಸ್ಕಾಂ ಅಧಿಕಾರಿ, ಕಾಯಂ ಬೆಸ್ಕಾಂ ನೌಕರ ಹೆಚ್.ಸಿ.ಪ್ರೇಮ್ ಕುಮಾರ್, ಎಸ್.ಟಿ. ಶಾಂತಮಲ್ಲಪ್ಪ ಅಧೀಕ್ಷಕ ಇಂಜಿನಿಯರ್ ಈ ನಾಲ್ವರನ್ನು ಬಂಧಿಸಲಾಗಿದೆ.
ನಕಲಿ ದಾಖಲೆಗಳನ್ನು ಸಲ್ಲಿಸಿ ಅನುಕಂಪ ಆಧಾರಿತ ನೌಕರಿ ಪಡೆದು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ವಿ.ವಿರೇಶ್, ಕಿರಿಯ ಸಹಾಯಕ ಹುದ್ದೆ, ರಘುಕಿರಣ್ ಸಿ. ಸಹಾಯಕ ಹುದ್ದೆ, ಹರೀಶ್, ಕಿರಿಯ ಸಹಾಯಕ ಹುದ್ದೆ, ಶಿವಪ್ರಸಾದ್ ಎಂ.ಆರ್. (ನಕಲಿ ಅನುಕಂಪ ಆಧಾರಿತ ಜ್ಯೂನಿಯರ್ ಇಂಜಿನಿಯರ್ ಹುದ್ದೆ ಪಡೆದವರು) ಇವರುಗಳನ್ನು ಬಂಧಿಸಲಾಗಿದೆ. ಜೆ.ರಕ್ಷಿತ್ ಸಹಾಯಕ ಹುದ್ದೆ, ಓ.ಕಾರ್ತಿಕ್ ಸಹಾಯಕ ಹುದ್ದೆ ಇವರಿಬ್ಬರು ತಲೆಮರೆಸಿಕೊಂಡಿದ್ದಾರೆ.
ಇದಕ್ಕೆಲ್ಲಾ ಮಾಸ್ಟರ್ ಮೈಂಡ್ ಆದ ಎಲ್.ರವಿ. ಯಾರಿಗೂ ಗೊತ್ತಿಲ್ಲದೆ 30 ರಿಂದ 40 ಲಕ್ಷ ರೂಪಾಯಿ ಪಡೆದು ಬೆಸ್ಕಾಂನಲ್ಲಿ ಕಾಯಂ ಉದ್ಯೋಗ ಕೊಡಿಸಲಾಗಿದೆ. ಯಾರು ಸತ್ತಿಲ್ಲ. ಯಾರಾದೋ ಹೆಸರು. ಆತ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿರುವಂತೆ ಮತ್ತು ಸತ್ತಂತೆ ನಕಲಿ ದಾಖಲೆ ಸೃಷ್ಟಿಸಿ ನೇಮಕಾತಿ ಪತ್ರ ನೀಡಲಾಗಿದೆ. ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ಇವರ ನಡತೆ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಉಪ ಲೆಕ್ಕಾಧೀಕ್ಷಕ ಪರಶುರಾಮ್ ಅವರಿಗೆ ಇವರ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡುವಾಗ ಅನುಮಾನ ಬಂದಿದೆ. ತಕ್ಷಣ ಚಿತ್ರದುರ್ಗ ಬೆಸ್ಕಾಂ ಉಪವಿಭಾಗಕ್ಕೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದೆ.