ಬೆಂಗಳೂರು: ರಾಜ್ಯದ ನಂದಿನಿ ಹಾಲಿನ ಜೊತೆ ಗುಜರಾತ್ ಮೂಲದ ಅಮುಲ್ ಕಂಪನಿಯನ್ನು ವಿಲೀನಗೊಳಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ, ಗೋ ಬ್ಯಾಕ್ ಅಮುಲ್, ಅಮುಲ್ ಬೇಡ.. ನಂದಿನಿ ಉಳಿಸಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಕಾರ್ಯಕರ್ತರ ಪ್ರತಿಭಟನೆ ಜೋರಾಗುತ್ತಿದ್ದಂತೆ ಮೈಸೂರು ಬ್ಯಾಂಕ್ ವೃತ್ತದಲ್ಲೇ ಅಮುಲ್ ಕಂಪೆನಿಯ ಪ್ರತಿಕೃತಿ ದಹಿಸಿದರು. ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಅಮುಲ್ ಐಸ್ ಕ್ರೀಂ ನಿಂದ ಹಿಡಿದು ಬಿಸ್ಕೆಟ್ ವರೆಗೆ ಯಾವ ಉತ್ಪನ್ನವನ್ನೂ ಮಾರಾಟ ಮಾಡಲು ಬಿಡುವುದಿಲ್ಲ. ಹೀಗಾಗಿ ಅಮುಲ್ ಕೂಡಲೇ ಹಾಲು, ಮೊಸರು ವ್ಯಾಪಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಅಮೂಲ್ ಭಾವಚಿತ್ರವನ್ನು ದಹಿಸಿದರು.ಅಮುಲ್ ಕಂಪೆನಿಯ ಹಾಲು, ಬೆಣ್ಣೆ ಹಾಗೂ ತುಪ್ಪ ಸೇರಿದಂತೆ ರಸ್ತೆಗೆ ಎಸೆದು ಅಕ್ರೋಶ ವ್ಯಕ್ತಪಡಿಸಿದರು.