ನಂದಿನಿ-ಅಮೂಲ್ ವಿಲೀನ್ ಅಸಾಧ್ಯ: ಬಾಲಚಂದ್ರ ಜಾರಕಿಹೊಳಿ

ಅಮೂಲ್‌
Advertisement

ಬೆಳಗಾವಿ: ಕೆಎಂಎಫ್ ಯಾವ ಕಾಲಕ್ಕೂ ಅಮೂಲ್ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ವಿವಾದಕ್ಕೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತೆರೆ ಎಳೆದಿದ್ದಾರೆ,
ನಗರದಲ್ಲಿಂದು ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ನ ಮಾರುಕಟ್ಟೆಯ ಯೋಜನೆಗಳ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ಇಲ್ಲದೇ ವಿನಾಕಾರಣ ಜನರಲ್ಲಿ ಗೋಂದಲಗಳನ್ನು ಸೃಷ್ಟಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು,. ಕಳೆದ 3 ತಿಂಗಳಿನಿಂದ ಕೆಎಂಎಫ್ ವಿಚಾರವಾಗಿ ಹಲವು ರಾಜಕೀಯ ನಾಯಕರು, ಗಣ್ಯರು ತಿಳಿದು, ತಿಳಿಯದೋ ಮಾತನಾಡುತ್ತಿದ್ದಾರೆ. ಇದರಿಂದ ಕೆಎಂಎಫ್ನ ರೈತರು, ಕಾಮರ್ಿಕರು, ಗ್ರಾಹಕರಿಗೆ ಚಿತ್ರಹಿಂಸೆಯಾಗುತ್ತಿದೆ ಎಂದರು.
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ ಶಾ ಅವರು ಕೆಎಂಎಫ್ನ ಬಲವರ್ಧನೆಗಾಗಿ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಅಮೂಲ್ ಮಾದರಿಯಂತೆ ಸಲಹೆ ನೀಡಿದ್ದಾರೆ.
ಆದರೆ ಇದನ್ನೇ ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ರಾಜ್ಯದಲ್ಲಿ ಅಮೂಲ್ ಬಂದು ಎಷ್ಟೋ ವರ್ಷಗಳಾಗಿದ್ದರೂ ಇನ್ನೂ ರಾಜ್ಯದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನಾಡಿನ ರೈತರು, ಗ್ರಾಹಕರು ಕೆಎಂಎಫ್ನ ಮೇಲೆ ಇಟ್ಟಿರುವ ವಿಶ್ವಾಸ ಹಾಗೂ ನಂಬಿಕೆಗಳೇ ಕಾರಣವಾಗಿವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಅಂದಾಜು 40 ಲಕ್ಷ ಹೈನೋದ್ಯಮ ರೈತರು ಮತದಾರರಿದ್ದಾರೆ. ಇವರ ಹಿತವನ್ನು ಕಾಯುವ ಕೆಲಸವನ್ನು ಕೆಎಂಎಫ್ ಮಾಡುತ್ತಿದೆ,. ಹೀಗಾಗಿ ಬಿಜೆಪಿಗೆ ಮತ್ತು ರಾಜ್ಯ ಸಕರ್ಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ವಿರೋಧ ಪಕ್ಷಗಳು ಈ ರೀತಿಯ ಅಪಪ್ರಚಾರ ಮಾಡುತ್ತಿವೆ. ಆದರೆ ಅವರ ಆಸೆ ಯಾವತ್ತೂ ನನಸಾಗುವುದಿಲ್ಲ. ಇದೊಂದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಕೆಎಂಎಫ್ ವಿಚಾರದಲ್ಲಿ ದಯವಿಟ್ಟು ಅನಗತ್ಯವಾಗಿ ರಾಜಕೀಯ ತರಬೇಡಿ. ಇದೊಂದು ಸಹಕಾರ ಸ್ವಾಮ್ಯದ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಹೈನುಗಾರರು, ಗ್ರಾಹಕರು ಹಾಗೂ ನೌಕರರ ಒಳಿತನ್ನು ಕಾಪಾಡುವ ರಾಜ್ಯದ ಏಕಮೇವ ಸಹಕಾರ ಸಂಸ್ಥೆಯಾಗಿದೆ.
ಕೆಎಂಎಫ್ ವಾರ್ಷಿಕವಾಗಿ 22,000 ಕೋಟಿ ರೂ.ಗಳ ವಹಿವಾಟು ನಡೆಸಿದ್ದು ಇದರಿಂದ ಕೆಎಂಎಫ್ ಮತ್ತು 15 ಜಿಲ್ಲಾ ಹಾಲು ಒಕ್ಕೂಟಗಳು ಸೇರಿ ವಾಷರ್ಿಕವಾಗಿ ಅಂದಾಜು 200 ಕೋಟಿ ರೂ.ಗಳ ಲಾಭ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದರು.,
ನಂದಿನಿ ನಮ್ಮೆಲ್ಲರ ಹೆಮ್ಮೆಯಾಗಿದೆ. ನಂದಿನಿಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಆಧ್ಯ ಕರ್ತವ್ಯವಾಗಿದೆ. ದಯವಿಟ್ಟು ಯಾರೂ ನಂದಿನಿ-ಅಮೂಲ್ ವಿಚಾರದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡರು,
ನಾವು ಅಧಿಕಾರಕ್ಕೆ ಬಂದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಈ ಹಿಂದೆ ಯಾರೂ ಮಾಡದ ನೌಕರರ ನಿವೃತ್ತಿ ವೇತನವನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಇಂಧನ ಇಲಾಖೆಗೆ ವಿದ್ಯುತ್ ಬಿಲ್ಲಗಾಗಿಯೇ 120 ಕೋಟಿ ರೂ.ಗಳನ್ನು ಸಂದಾಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸೋಲಾರ ಪ್ಲಾಂಟ್ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಇದು ಜಾರಿಯಾದರೆ ವಾರ್ಷಿಕವಾಗಿ 40 ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದರು,