ಧ್ವಜಾರೋಹಣ ಮಾಡಿ ಸಂಭ್ರಮಿಸಿದ ಅಲೆಮಾರಿಗಳು

ಅಲೆಮಾರಿ
Advertisement

ಬಾಗಲಕೋಟೆ(ಕುಳಗೇರಿ ಕ್ರಾಸ್): ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹರ್ ಗರ್ ತಿರಂಗಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಗ್ರಾಮದಲ್ಲಿ ದೇಶಭಕ್ತರು ಬೆಳಿಗ್ಗೆಯಿಂದಲೇ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇತ್ತ ಮನೆ ಇಲ್ಲದವರು ತಮ್ಮ ಗುಡಿಸಲು ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರೆ ಕೆಲ ರೈತರು ತಮ್ಮ ಜಮೀನುಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಿದರು.
ಗ್ರಾಮದ ಎಪಿಎಂಸಿ ಆವರಣದಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ೮೦ಕ್ಕೂ ಹೆಚ್ಚು ಅಲೇಮಾರಿ ಕುಟುಂಬದ ನೂರಾರು ಸದಸ್ಯರು ಸೇರಿ ತಮ್ಮ ಗುಡಿಸಲು ಮೇಲೆ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದರು. ತಮ್ಮ ಗುಡಿಸಲು ಮುಂದೆ ರಂಗೋಲಿ ಹಾಕಿ ನಂತರ ರಾಷ್ಟ್ರಧ್ವಜಕ್ಕೆ ಪೂಜೆ ನಡೆಸಿ ಅವರು ಮಕ್ಕಳು ಮಹಿಳೆಯರು ಸೇರಿ ಧ್ವಜಾರೋಹಣ ಮಾಡಿದರು.
ನಂತರ ಅಲೆಮಾರಿ ಜನಾಂಗದ ಮುಖಂಡ ಮಾರುತಿ ಎಣ್ಣಿ ಮಾತನಾಡಿ, ಸರಕಾರ ಎಲ್ಲರಿಗೂ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಅವಕಾಶ ಕೊಟ್ಟಿರುವುದು ನಮಗೆ ಬಹಳ ಸಂತೋಷವಾಗಿದೆ. ಈ ಒಂದು ಅವಕಾಶವನ್ನ ನಾವು ಬೆಳಗ್ಗೆ ಬೇಗ ಎದ್ದು ಮನೆಯ ಹೆಣ್ಣು ಮಕ್ಕಳು ಸಾರಣಿ ಮಾಡಿ ರಂಗೋಲಿ ಹಾಕಿ ಹಬ್ಬಂದಂತೆ ಆಚರಿಸಿದ್ದೇವೆ ಎಂದರು.

ಅಲೆಮಾರಿ

ನಾವು ಅಲೆಮಾರಿ ಜನಾಂಗದವರು ಸುಮಾರು ವರ್ಷಗಳಿಂದ ಕುಳಗೇರಿ ಗ್ರಾಮದ ಒಂದೆ ಸ್ಥಳದಲ್ಲಿ ಗುಡಿಸಲಲ್ಲಿ ವಾಸವಿದ್ದೇವೆ ಈಗಾಗಲೇ ಕೆಲ ಕುಟುಂಬಗಳಿಗೆ ಸರಕಾರ ಮನೆಗಳನ್ನ ಕೊಟ್ಟಿದೆ ಇನ್ನೂ ಕೆಲ ಕುಟುಂಬಗಳು ಇನ್ನು ಗುಡಿಸಲಲ್ಲೇ ವಾಸವಿದ್ದು ಅವರಿಗೆ ಸರ್ಕಾರದಿಂದ ಮನೆಗಳನ್ನು ಕೊಡಬೇಕು.
– ಮಾರುತಿ ಎಣ್ಣಿ ಅಲೆಮಾರಿ ಜನಾಂಗದ ಮುಖಂಡ