ಧಾರಾಕಾರ ಮಳೆ-ಸೊರಗಿದ ಸೌತೆಕಾಯಿ ಬೆಳೆ

Advertisement

ಕೋಲಾರ: ಮಾಂಡೌಸ್‌ ಚಂಡಮಾರುತ ರೈತರನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತೋಟ, ಗದ್ದೆ ಜಲಾವೃತವಾಗಿವೆ.
ಕೋಲಾರ ತಾಲ್ಲೂಕಿನ ಶಿಳ್ಳೆಗೆರೆ ಗ್ರಾಮದಲ್ಲಿ‌ ರೈತ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಸೌತೇಕಾಯಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಸುಮಾರು 1.5 ಲಕ್ಷ ರೂ. ಬಂಡವಾಳ ಹಾಕಿ ಬೆಳೆ ಬೆಳೆದಿದ್ದ ರೈತ ಇದರಿಂದ ಕಂಗಾಲಾಗಿದ್ದಾನೆ.