ಧಾರವಾಡ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಧಾರವಾಡ-ಬೆಳಗಾವಿ-ಧಾರವಾಡ ನಡುವೆ ವಿಶೇಷ ರೈಲನ್ನು ಮಾರ್ಚ್ 6ರಿಂದ ಓಡಿಸಲಿದೆ. ಇದು ಕಾಯ್ದಿರಿಸದ (ಟ್ರೇನ್ ಆನ್ ಡಿಮ್ಯಾಂಡ್) ವಿಶೇಷ ರೈಲು ಸೇವೆಯಾಗಿದ್ದು, ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಈ ರೈಲು ಆರಂಭಿಸಲಾಗಿದೆ. ರೈಲು ಸಂಖ್ಯೆ 07357 ಧಾರವಾಡ ಬೆಳಗಾವಿ ರೈಲು ಧಾರವಾಡದಿಂದ ಬೆಳಗ್ಗೆ 8:15 ಕ್ಕೆ ಹೊರಟು 10:45 ಕ್ಕೆ ಬೆಳಗಾವಿ ತಲುಪುತ್ತದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 6, 2023 ರಿಂದ ಸೆಪ್ಟೆಂಬರ್ 6, 2023 ರವರೆಗೆ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಉಭಯ ನಗರಗಳ ನಡುವೆ ಪ್ರತಿದಿನ ನೂರಾರು ಜನರು ಸಂಚಾರ ನಡೆಸುತ್ತಾರೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.