ಧರ್ಮಾತೀತವಾಗಿ ಬೆಳೆದಿರೋದು ಬೆಂಗಳೂರಿನ ಶಕ್ತಿ ವರ್ಣಿಸಲು ನೂರು ಪದಗಳು ಸಾಕಾಗಲ್ಲ;ಅಶ್ವತ್ಥ್​​ ನಾರಾಯಣ

Advertisement

ದೇವನಹಳ್ಳಿ : ಕೆಂಪೇಗೌಡರ ಪ್ರತಿಮೆ ಅನಾವರಣ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಅಶ್ವತ್ಥ್​​​ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಮಾನ್ಯ ಪಡೆದ ಏಕೈಕ ನಗರ ಅದು ಬೆಂಗಳೂರು. ಬೆಂಗಳೂರು ಸಂಸ್ಥಾಪಕರಾದ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವುದು ಬಹು ದಿನದ ಬೇಡಿಕೆ ಆಗಿತ್ತು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಆಗ್ತಿದೆ. ಜಾತಿ, ಧರ್ಮಾತೀತವಾಗಿ ಬೆಳೆದಿರೋದು ಬೆಂಗಳೂರಿನ ಶಕ್ತಿ ವರ್ಣಿಸಲು ನೂರು ಪದಗಳು ಸಾಕಾಗಲ್ಲ. ಈ ಸಂದೇಶವನ್ನ ವಿಶ್ವಕ್ಕೆ ತಿಳಿಸುವಂತಾಗಬೇಕು.