ದೋಟಿಹಾಳ-ಕೇಸೂರು ಗ್ರಾಮಗಳ ಅವಧೂತ ವೈಭವ

ಕುಷ್ಟಗಿ
Advertisement

ಶ್ರೀಕಾಂತ ಶೇಖರಯ್ಯ ಸರಗಣಾಚಾರಿ
ಕುಷ್ಟಗಿ: ತಾಲೂಕಿನ ದೋಟಿಹಾಳ ಮತ್ತು ಕೇಸೂರ ಗ್ರಾಮದ ಪವಾಡ ಪುರುಷ, ಅವಧೂತ ಶುಖಮುನಿ ಸ್ವಾಮಿಗಳು ಹಸನ್ಮುದು, ಸಿದ್ದಲಿಂಗ ಸಾಧುಗಳು ಇವರನ್ನು ಗುರುತಿಸಿ ವ್ಯಾಸರ ಮಗ ಶುಖಮುನಿಯ ಪುನರಾವತಾರವೆಂದು ಭಾವಿಸಿ ಯೋಗಿಗಳಿಗೆ ಅವಧೂತ ಶುಖಮುನಿ ಎಂದರು. ಗ್ರಾಮದ ದಕ್ಷಿಣ ಭಾಗಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಳೆದ ಡಬಗಳ್ಳಿಯ ಮಧ್ಯದಲ್ಲಿ ಬಸವೇಶ್ವರ ದೇವಸ್ಥಾನವಿತ್ತು, ಅದು ಜನವಿರಳ, ಆಕಸ್ಮಿಕವಾಗಿ ಕುರಿಮರಿಯೊಂದು ತಪ್ಪಿಸಿಕೊಂಡು ಡಬಗಳ್ಳಿಯ ಒಳಗೆ ಹೋಯ್ತು, ಕುರಿಕಾಯುವ ಕುಡುಗೋಲಿನಿಂದ ಡಬಗಳೆಯನ್ನು ಬಯಲು ಮಾಡುತ್ತ ಒಳಗೆ ಹೋದಾಗ ಪುರಾತನ ಕಾಲದ ಬಯಲು ಬಸವೇಶ್ವರ ದೇವಸ್ಥಾನ, ಎದುರು ಕಲ್ಲು ಬಂಡೆಯ ಮೇಲೆ ದಿಗಂಬರ ಸ್ಥಿತಿಯಲ್ಲಿ ಕುಳಿತು ಧ್ಯಾನಗೈಯುತ್ತಿರುವ ಮುನಿಕಂಡರು. 
ಕುರಿಗಾಹಿ ಈ ವ್ಯಕ್ತಿಯ ಕುರಿತು ದೋಟಿಹಾಳ ಗ್ರಾಮದ ಜನರಿಗೆ ತಿಳಿಸಿದನು. ಗ್ರಾಮದ ಪೊಲೀಸ್‌ ಗೌಡರಾದ ರಾಜೇಗೌಡರಿಗೂ ಸುದ್ದಿ ಮುಟ್ಟಿತು. ರಾಜೇಗೌಡರು ನೀವು ಯಾರು ಯಾಕೆ ಇಲ್ಲಿ ಕುಳಿತಿರಿ ಎಂದು ಕೇಳಿದರು. ಅದಕ್ಕೆ ಯೋಗಿಗಳು ಮೌನ ಉತ್ತರ ನೀಡಿದರು. ಪ್ರಶ್ನೆಗಳಿಗೆ ಉತ್ತರ ಕೊಡದ ಯೋಗಿಯನ್ನು ಕಂಡು ಇವರು ಮಹಾನ್ ಕಳ್ಳನೇ ಇರಬೇಕು ಎಂದು ಭಾವಿಸಿ ಚಾವಡಿಗೆ ಕರೆಯಿಸಿ ಕಂಬಕ್ಕೆ ಕಟ್ಟಿ ಈಚಲ ಬರಲುಗಳಿಂದ ಹೊಡೆಸಿದರು. ಈಚಲು ಬರಲುಗಳು ಮುರಿದವು ಹೊರತು ಯೋಗಿಗಳ ಮುಖದಲ್ಲಿದ್ದ ಚಿಹ್ನೆ ಕಾಣಲಿಲ್ಲ. ಅವಧೂತ ಸ್ಥಿತಿಯಲ್ಲಿರುವವರಿಗೆ ಬಹಿರಂಗದ ನೋವು ಅಂತರಂಗಕ್ಕೆ ಹೇಗೆ ತಿರುಗಿತು. ಚಾವಡಿಗೆ ಬಂದು ವಿಚಾರಿಸಿದಾಗ ಅವರು ಸಾಧಾರಣ ಮಹಾತ್ಮರಲ್ಲ. ಎಂಬುದು ದೋಟಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹರಡಿತು. 
ಮಳೆ ಬಾರದ ಊರಿಗೆ ಹರನಾಳಿಗೆ ಮೂಲಕ ಗ್ರಾಮಕ್ಕೆ ದೊಡ್ಡ ಮಳೆಯನ್ನು ತರಿಸಿದ ಕೀರ್ತಿ ಕುಮುನಿ ತಾತನಿಗೆ ಸಲ್ಲುತ್ತದೆ. ಪವಾಡಗಳನ್ನು ಮಾಡುತ್ತ, ಕೆಲ ದಿನಗಳು ಉರುಳಿದವು, ದಿ. 26-11-1938ರಂದು ತಾತನವರು ರುದ್ರಮುನಿ ಸ್ವಾಮಿಗಳ ಮಠದ ಹತ್ತಿರ ಶರೀರ ತ್ಯಾಗ ಮಾಡಿದರು. ಆಗ ಗ್ರಾಮದ ಹಿರಿಯರು ಮರದಲ್ಲಿ ಗದ್ದುಗೆಯನ್ನು ಪ್ರತಿಷ್ಠಾಪಿಸಿದರು. ಇಂತಹ ಮಹಿಮಾ ಪುರುಷನ ಜಾತ್ರೆ ಮಾಡಬೇಕು ಎಂದು ಅರಿತ ಜನರು ಮಾಘ ಬಹ ಸಪ್ತಮಿಗೆ ಭಜನೆ ಹಚ್ಚಿ ಬರುವ ಶಿವರಾತ್ರಿ ಅಮಾವಾಸ್ಯೆಯ ದಿವಸ ಜಾತ್ರೆ ಮಾಡಲು ನಿರ್ಧರಿಸಿದರು. ಅದೇ ಪ್ರಕಾರವಾಗಿ ಇಂದಿಗೂ ಮಾಘ ಬಹುಳ ಸಪ್ತಭಜನೆ ಸಪ್ತಭಜನೆ ಮತ್ತು ಪಲ್ಲಕ್ಕಿ ಉತ್ಸವ ಜರುಗುತ್ತದೆ.
ಶ್ರೀ ಅವಧೂತ ಶುಖಮುನಿಸ್ವಾಮಿಗಳು ಅನೇಕ ಪವಾಡ ಮಾಡಿದ್ದಾರೆ, ಒಂದು ದಿನ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಮಳೆಯ ಆರ್ಭಟ ಹೆಚ್ಚಾದಂತೆ ಊರಲ್ಲಿ ನೀರು ಕಾಲುವೆಯ ರೀತಿಯಲ್ಲಿ ಹರಿಯತೊಡಗಿತು ಊರಿನ ಹೊರಗೆ ಹಳ್ಳಗಳು ತುಂಬಿ ಹರಿಯತೊಡಗಿದವು ಇಂತಹ ಸಮಯದಲ್ಲಿ ಶುಖಮುನಿಸ್ವಾಮಿಗಳು ಊರಿಗೆ ಹೊರಟು ಹೋದರು ಅವರನ್ನು ನೋಡಲು ಸಿದ್ದಲಿಂಗ ಸಾಧುಗಳು ಶಿಷ್ಯರನ್ನು ಕಳಿಸಿದರು. ಆದರೆ ಅವರು ಕಂಡ ದೃಶ್ಯ ಆಶ್ಚರ್ಯಕರವಾಗಿತ್ತು. ತುಂಬಿ ಹರಿಯುವ ಹಳ್ಳದ ಮೇಲೆ ಸರಳವಾಗಿ ಹೊರಟು ಹೋಗುವ ದೃಶ್ಯ ಕಂಡಿತು. ಹಳ್ಳದ ದಂಡೆಯ ಮೇಲೆ ಕಾಣಸಿಕೊಂಡು ಹೆಸರೂರ ಗ್ರಾಮಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಆಗಮಿಸಿದರು. ಇಂದಿಗೂ ಸಹ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಮಹೋತ್ಸವವೂ ಜರುಗುತ್ತದೆ. ಅದರಲ್ಲಿ ಒಂದು ದಿನ ಪಲ್ಲಕ್ಕಿ ಹೆಸರೂರ ಗ್ರಾಮಕ್ಕೆ ಹೋಗಿ  ಕುಷ್ಟಗಿಯಿಂದ ಇಳಕಲ್‌ಗೆ ಎರಡು ಬಸ್‌ಗಳು ಓಡಾಡುತ್ತಿದ್ದವೂ ಒಂದು ದಿನ ತಾತನವರು ಇಳಕಲ್ ಸರಕಾರಿ ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಟೇಬಲಿನ ಮೇಲೆ ವಿಷದ ಬಾಟಲಿಗಳನ್ನು ಇಟ್ಟಿದ್ದರು ಅದನ್ನು ಶುಖಮುನಿ ತಾತನವರು ನೀರಿನಂತೆ ಆ ವಿಷವನ್ನು ಕುಡಿದು ಬಿಟ್ಟರು ಅದನ್ನು ನೋಡಿದ ವೈದ್ಯರು ಗಾಬರಿಯಾದರು. ಮಾರನೇ ದಿನ ಆ ವಿಷ ಕುಡಿದ ಶುಖಮುನಿ ತಾತನವರನ್ನು ಕಂಡು ಆಶ್ಚರ್ಯಚಿಕತನಾದ ವೈದ್ಯ ವಿಷ ಸೇವಿಸಿದರೆ ಪ್ರಾಣ ಉಳಿಯುವುದಿಲ್ಲಾ ಇಂತಹದರಲ್ಲಿ ಪೂರ್ಣ ಬಾಟಲಿ ವಿಷ ಸೇವಿಸಿದ ತಾತನವರು ಬದುಕಿ ಉಳಿದದ್ದನ್ನ ಪ್ರತ್ಯಕ್ಷವಾಗಿ ಕಂಡ ಬೆರಗಾದರು. ತಾತನ ಈ ಪವಾಡಗಳು ತಿಳಿದ ಗ್ರಾಮದ ಜನರು ಅವರ ದರ್ಶನಕ್ಕೆ ಬರಲು ಪ್ರಾರಂಭಿಸಿದರು ಹೀಗೆ ಶುಖಮುನಿಗಳ ಪವಾಡ ಊರ ತುಂಬಾ ಹಬ್ಬತೊಡಗಿತು. ಕಾಲರಾ ಬಂದ ಕಾಲಕ್ಕೆ ದೋಟಿಹಾಳ-ಕೇಸೂರ ಗ್ರಾಮದ ಸುತ್ತಲೂ ಇರುವ ದಾರಿ ದಾರಿಗೆ ಮುಳ್ಳನ್ನು ಹಚ್ಚಿ ಗ್ರಾಮಕ್ಕೆ ಕಾಲರಾ ಬಾರದಂತೆ ಮಾಡಿದರು. ಇಂದಿಗೂ ಸಹ ಈ ಗ್ರಾಮಕ್ಕೆ ಕಾಲರಾ ರೋಗ ಬಂದಿರುವದಿಲ್ಲಾ. ಚಿಕ್ಕ ಮಕ್ಕಳು ಎಂದರೆ ಶುಖಮುನಿ ತಾತನಿಗೆ ತುಂಬಾ ಇಷ್ಟಪಡುತ್ತಿದ್ದರು. ಇಷ್ಟೇ ಅಲ್ಲದೆ ಅನೇಕ ಪವಾಡಗಳನ್ನು ಮಾಡಿದ್ದಾರೆ.

ಫೆ. ೨೦ರಂದು ರಥೋತ್ಸವ
ದೋಟಿಹಾಳ ಗ್ರಾಮದ ಶುಖಮುನಿ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ನೋಡಲು ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗತೊಡಗಿತು. ಜಾತ್ರೆಯ ಸಂದರ್ಭ ಏಳು ದಿನಗಳ ಕಾಲ ಮೊದಲು ಭಾವಚಿತ್ರ ಮೆರವಣಿಗೆ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯುತ್ತಿದೆ. ಏಳನೇ ದಿನವಾದ ಶಿವರಾತ್ರಿ ಅಮಾವಾಸ್ಯೆಯ ಸಮಾಪ್ತಿಯಾಗುತ್ತದೆ. ಅಮಾವಾಸ್ಯೆಯ ದಿವಸ ಫೆ. 20ರಂದು ಸಂಜೆ 6 ಗಂಟೆಗೆ ರಥೋತ್ಸವಕ್ಕೆ ದಿನ ಚಾಲನೆ ನೀಡಲಾಗುತ್ತದೆ. ರಥೋತ್ಸವದಲ್ಲಿ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು, ಬೇರೆ ಬೇರೆ ಜಿಲ್ಲೆಗಳಿಂದ ಊರುಗಳಿಂದ ಜಾತ್ರೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಶುಖಮುನಿ ಸ್ವಾಮಿಗಳ ಆಶೀರ್ವಾದ ಪಡೆಯುತ್ತಾರೆ.

ಕುಷ್ಟಗಿ