ಕಾರ್ಕಳ: ದಾಖಲೆಯಿಲ್ಲದೆ ಸಾಗಿಸುತಿದ್ದ ಐವತ್ತು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಕಾರ್ಕಳ ತಾಲೂಕಿನ ಸಾಣೂರು ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಹಣವನ್ನು ಮೂಡುಬಿದಿರೆ ಎಸ್‌ಸಿಡಿಸಿಸಿ ಬ್ರಾಂಚ್‌ನಿಂದ ಕಾರ್ಕಳ ಕಡೆಗೆ ಸಾಗಿಸಲಾಗುತಿತ್ತು ಎನ್ನಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ. ಇನ್ನೊಂದು ಘಟನೆ ಸಂಬಂಧಿಸಿದಂತೆ ಅಖಿಲ್ ಕಂಪೆನಿಗೆ ಸೇರಿದ ದಾಖಲೆಯಿಲ್ಲದೆ ಸಾಗಿಸುತಿದ್ದ ಒಂದು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಸಾಣೂರು ಚೆಕ್‌ಪೋಸ್ಟ್‌ನಲ್ಲಿ ವಶ ಪಡಿಸಿಕೊಳ್ಳಲಾಗಿದೆ.