ದಾಖಲೆ ಇಲ್ಲದ ಒಂದು ಕೋಟಿ ಹಣ ಪತ್ತೆ

Advertisement

ಕಲಬುರಗಿ: ಚೆಕ್‌ಪೋಸ್ಟ್‌ನಲ್ಲಿ ಕಾರು ತಪಾಸಣೆ ವೇಳೆ ದಾಖಲೆ ಇಲ್ಲದ ಒಂದು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.
ಕಲಬುರಗಿಯ ಫರಹತಾಬಾದ್ ಚೆಕ್‌ಪೋಸ್ಟ್ ಬಳಿ ಕಾರು ತಪಾಸಣೆ ವೇಳೆ ಹಣ ಪತ್ತೆಯಾಗಿದ್ದು, ಕಲಬುರಗಿಯಿಂದ ಮುಡಬೂಳ ಕಡೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ತಪಾಸಣೆ ಮಾಡಿದ ಸಂದರ್ಭದಲ್ಲಿ ʼನನ್ನ ಹತ್ತಿ ಮಿಲ್ ಇದೆ ಲೇಬರ್ ಪೆಮೆಂಟ್ ಮಾಡಲು ತೆಗೆದುಕೊಂಡು ಹೋಗುತ್ತಿದ್ದೇನೆ ʼ ಎಂದು ರವಿ ಎನ್ನುವವರು ಹೇಳಿದ್ದಾರೆ. ಪೊಲೀಸರು ಸದ್ಯ ಆತನಿಗೆ ನೋಟಿಸ್ ನೀಡಿದ್ದು, ದಾಖಲೆ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪರಹತಾಬಾದ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನೂ ಯಾವುದೇ ಕೇಸ್ ದಾಖಲಾಗಿಲ್ಲ.