ಹುಬ್ಬಳ್ಳಿ: ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಚಿತ್ರನಟ ದರ್ಶನ್ ವಿರುದ್ಧ ಕೇಳಿಬಂದಿರುವ ಆರೋಪ ಗಂಭೀರವಾದುದು. ಪೂರ್ಣ ತನಿಖೆ ಬಳಿಕ ಆತ ಮನುಷ್ಯನೊ ರಾಕ್ಷಸನೊ ಎಂಬುದು ಗೊತ್ತಾಗುತ್ತದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ಅಪರಾಧ ಕೃತ್ಯ ಹೆಚ್ಚಾಗಲು ರಾಜ್ಯ ಸರ್ಕಾರದ ಸಡಿಲ ಆಡಳಿತವೇ ಕಾರಣ. ದುಡ್ಡು ಇದ್ದವರು, ಸ್ಟಾರ್ ಆಗಿರುವವರು ಅಪರಾಧ ಕೃತ್ಯಗಳನ್ನು ಹೆಚ್ಚು ನಡೆಸುತ್ತಿದ್ದಾರೆ. ಸಮಾಜ ವಿರೋಧಿ, ಅಪರಾಧ ಕೃತ್ಯ ಎಸಗುತ್ತಿರುವವರಿಗೆ ಕಾಂಗ್ರೆಸ್ ಸರ್ಕಾರ ರಾಜಾತಿಥ್ಯ ನೀಡುತ್ತಿದೆ. ಕೂಡಲೇ ಈ ನಡೆ ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.