ಧಾರವಾಡ: ನೀನು ಯಾವ ಚೌಕಿ, ಯಾವ ಪ್ರದೇಶ ಹೇಳುತ್ತಿ ಅದೇ ಜಾಗೆಗೆ ಬರುತ್ತೇನೆ. ನಿನಗೆ ದಮ್ ಇದ್ದರೆ ಬಾರೋ ಎಂದು ಕಾಂಗ್ರೆಸ್ ಮುಖಂಡನಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲ್ ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜುಮನ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರಗೆ ಅವಾಚ್ಯ ಶಬ್ದ ಬಳಕೆ ಮಾಡಿ ಸವಾಲ್ ಹಾಕಿದ ಯತ್ನಾಳ, ಧಾರವಾಡಕ್ಕೆ ಬಂದು ನೋಡು ಎಂದು ಸವಾಲ್ ಹಾಕಿದ್ದಿರಿ. ಈಗ ಬಂದಿದ್ದೇನೆ. ನೀನೆಲ್ಲಿದ್ದಿ ಎಂದು ಪ್ರಶ್ನಿಸಿದರು.
ಧಾರವಾಡದಲ್ಲಿ ಎಲ್ಲಿ ಬೇಕಾದರು ಕರೆಯಲಿ ಬರುತ್ತೇನೆ. ಗೋಕಾಕದಲ್ಲಿಯೂ ನನಗೆ ಸವಾಲು ಹಾಕಿದ್ದರು, ಗೋಕಾಕ ಹೇಗೆ ಬರ್ತಿಯಾ ನೋಡ್ತಿವಿ ಅಂದಿದ್ದರು. ಅಲ್ಲಿ ಹೋಗಿ ದೊಡ್ಡ ಸಮಾವೇಶ ಮಾಡಿ ಬಂದಿದ್ದೇನೆ.
ಮುಂದಿನ ಬಾರಿ ಧಾರವಾಡದಲ್ಲಿ ಸಮಾವೇಶ ಮಾಡುತ್ತೇನೆ. ನಿನಗೆ ದಮ್ ಇದ್ದರೆ ನೀನು ಬಂದು ತಡಿ ಎಂದು ಗುಟುರ್ ಹಾಕಿದರು.