ಥೀಮ್​ ಪಾರ್ಕ್​ಗೆ ಶಂಕು ಸ್ಥಾಪನೆ… ಗುದ್ದಲಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ…

Advertisement

ದೇವನಹಳ್ಳಿ : ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ನಿರ್ಮಿಸುತ್ತಿರುವ ಕೆಂಪೇಗೌಡರ ಥೀಮ್​ ಪಾರ್ಕ್​​ಗೆ ಸಿಎಂ ಬಸವರಾಜ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದ್ಧಾರೆ.

108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯ ಈಗಾಗಲೇ ಮುಗಿಯುವ ಹಂತದಲ್ಲಿದ್ದು, ಥೀಮ್​ ಪಾರ್ಕ್​​​ಗೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಸಚಿವರಾದ ಆರ್​​.ಅಶೋಕ್​​, ಡಾ.ಅಶ್ವಥ್​​ ನಾರಾಯಣ್​​, ಡಾ.ಕೆ.ಸುಧಾಕರ್​​, ಕೆ.ಗೋಪಾಲಯ್ಯ, ಸಂಸದರಾದ ಡಿ.ವಿ.ಸದಾನಂದಗೌಡ, ಪಿಸಿ ಮೋಹನ್​​, ಬಿಡಿಎ ಅಧ್ಯಕ್ಷ ಎಸ್​.ಆರ್​​​.ವಿಶ್ವನಾಥ್​​​, ರಾಜ್ಯ ಸಭೆ ಸದಸ್ಯ ಜಗ್ಗೇಶ್​, ಎಂಎಲ್​ಸಿ ವೈ. ನಾರಾಯಣಸ್ವಾಮಿ ಮತ್ತಿತರರು ಭಾಗಿಯಾಗಿದ್ದರು.