ದಾವಣಗೆರೆ: ಆಡಿಕೊಂಡು ಬೆಳೆಯಬೇಕಾದ ೧೦ ವರ್ಷದ ಪುಟ್ಟ ಬಾಲಕ ಥಲಸ್ಸೇಮಿಯಾ ರೋಗಕ್ಕೆ ತುತ್ತಾಗಿದ್ದು ಆತನ ಚಿಕಿತ್ಸೆಗೆ ಬರೋಬ್ಬರಿ ೨೨ ಲಕ್ಷ ರೂ., ಗೂ ಹೆಚ್ಚಿನ ಆರ್ಥಿಕ ನೆರವಿನ ಅವಶ್ಯಕತೆ ಇರುವುದರಿಂದ ದಾನಿಗಳು ನೆರವಿನ ಹಸ್ತ ಚಾಚುವಂತೆ ಪೋಷಕರು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಾಲಕನ ತಂದೆ ಸಂತೋಷ್ ಕುಮಾರ್ ಮಾತನಾಡಿ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟೆ, ಗ್ರಾಮದವರಾಗಿರುವ ತಾವು ಜೀವನ ನಡೆಸಲು ಸಣ್ಣ ಬೇಕರಿ ನಡೆಸುತ್ತಿದ್ದು, ತಮ್ಮ ಮಗ ಕೃಷ್ಣ ಹುಟ್ಟಿದ ಆರು ತಿಂಗಳಿಂದ ಥಲಸ್ಸೇಮಿಯ ಎಂಬ ರಕ್ತದ ಅವ್ಯವಸ್ಥೆಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಅವನಿಗೆ ಬೆಂಗಳೂರಿನ ಎನ್. ಹೆಚ್ ಮುಜುಂದರ್ ಷಾ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಕೊಡಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಬೋನ್ ಮ್ಯಾರೊ ಪ್ಲಾಂಟ್ ಅವಶ್ಯಕತೆ ಇದೆ. ಇದಕ್ಕೆ ಸುಮಾರು ಸುಮಾರು ೨೨ ಲಕ್ಷ ರೂ., ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸುಮಾರು ೧ ವರ್ಷಗಳ ಕಾಲ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಬೇಕಿರುವುದರಿಂದ ಸುಮಾರು ೪೦-೫೦ ಲಕ್ಷದ ವರೆಗೂ ಹಣ ಖರ್ಚಾಗುವ ಸಾಧ್ಯತೆ ಇರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ತಮಗೆ ಚಿಕಿತ್ಸೆ ಕೊಡಿಸಲು ದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿದರು.
ಹೆಸರು : ಎಸ್.ಎಸ್ ಕೃಷ್ಣ
ಕರ್ನಾಟಕ ಬ್ಯಾಂಕ್
ಖಾತೆ. ನಂ: ೮೧೬೨೫೦೦೧೦೦೩೪೬೫೦೧,
ಐಎಫ್‌ಎಸ್ಸಿ ಕೋಡ್: ಕೆಎಆರ್ ಬಿ ೦೦೦೦೮೧೬,
ಎಂಐಸಿಆರ್ ಕೋಡ್: ೫೮೧೦೫೨೫೩೪
ಮೊಬೈಲ್ : ೮೧೫೧೮೭೪೭೧೪
ಧನಸಹಾಯ ಮಾಡುವಂತೆ ತಿಳಿಸಲಾಗಿದೆ. ಸುದ್ದಿಗೋಷ್ಟಿಯಲ್ಲಿ ತಾಯಿ ಚೇತನಾ, ಬಾಲಕ ಕೃಷ್ಣ, ಮಾಲ, ದೀಪಾ, ದ್ರಾಕ್ಷಾಯಣಮ್ಮ ಇದ್ದರು.