ಬೆಂಗಳೂರು: ಅಜಾತಶತ್ರು, ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಯುತ್ತಿದೆ. ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಜಾಧವ್ ನಿರ್ದೇಶಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಮತ್ತು ಹಿರಿಯ ನಾಯಕ ವಾಜಪೇಯಿ ಅವರ ಜೀವನ ಪ್ರಯಾಣದ ರೋಚಕ ಕಥೆಯಲ್ಲಿ ಅಟಲ್ ಜೀ ಯವರ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಂಕಜ್ ತ್ರಿಪಾಠಿ ಹಾಕಿರುವ ಸಂದೇಶ ವೈರಲ್ ಆಗಿದ್ದು, ಬಹು ಜನಪ್ರಿಯ ಆಗಿದೆ.
ಎಂದೂ ಕುಗ್ಗಲಿಲ್ಲ
ಯಾವತ್ತೂ ತಲೆ ಬಾಗಲಿಲ್ಲ
ನಾನೊಬ್ಬ ವಿಶಿಷ್ಟ ಶಕ್ತಿ
ನಾನು ಅಚಲ : ಪಂಡಿತ್ ಧೀರೇಂದ್ರ ತ್ರಿಪಾಠಿ
ಈ ವಿಶಿಷ್ಟ ವ್ಯಕ್ತಿತ್ವವನ್ನು ತೆರೆಯ ಮೇಲೆ ವ್ಯಕ್ತಪಡಿಸುವ ಅವಕಾಶ ಸಿಕ್ಕಿದೆ. ನಾನು ಭಾವುಕನಾಗಿದ್ದೇನೆ ನಾನು ಋಣಿಯಾಗಿದ್ದೇನೆ
MainAtalHoon ಚಿತ್ರಮಂದಿರಗಳಲ್ಲಿ, ಡಿಸೆಂಬರ್ 2023. ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಂಕಜ್ ತ್ರಿಪಾಠಿ ಹಾಕಿರುವ ಸಂದೇಶವಾಗಿದೆ.