ಧಾರವಾಡ: ಪಾಲಿಕೆ ಸಭಾಭವನದಲ್ಲಿ ಗೌನ್ ವಿಚಾರದ ಕಾವು ಹೆಚ್ಚಾದರೆ ಹೊರಗಡೆ ಪ್ರತ್ಯೇಕ ಪಾಲಿಕೆ ಹೋರಾಟಗಾರರು ಪಾಲಿಕೆ ಸದಸ್ಯರ ವಿರುದ್ಧ ಕಿಡಿಕಾರಿ ಗಲಾಟೆ ನಡೆಸಿದರು.
ಮುಂಜಾನೆ 12ರಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸೌಜನ್ಯಕ್ಕೂ ಹೋರಾಟಗಾರರನ್ನು ಪಾಲಿಕೆ ಆವರಣದ ಒಳಗಡೆ ಬಿಡಲಿಲ್ಲ. ಇದು ಸರ್ವಾಧಿಕಾರಿ ಆಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಿಂದ ಹೊರಬಂದ ಮಹಾಪೌರ ಈರೇಶ ಅಂಚಟಗೇರಿ ಹೋರಾಟಗಾರರನ್ನು ಒಳಬಿಡುವಂತೆ ಸೂಚಿಸಿದರು.
ಘೋಷಣೆ ಕೂಗುತ್ತ ಒಳಬಂದ ಪ್ರತಿಭಟನಾಕಾರರು ಮಹಾಪೌರರ ವಿರುದ್ಧ ಹರಿಹಾಯ್ದರು. ಮನವಿ ಸ್ವೀಕರಿಸಿ ಕ್ಷಮೆ ಯಾಚಿಸಿದ ಮಹಾಪೌರ ಅಂಚಟಗೇರಿ ರಾಜ್ಯೋತ್ಸವದ ಬಳಿಕ ಸರ್ವ ಪಕ್ಷದ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.