ಬಳ್ಳಾರಿ: ದೇವರನ್ನು ಒಲಿಸಿಕೊಳ್ಳಲು ಅಂಧ ಭಕ್ತನೋರ್ವ ಮನುಷ್ಯನ ಅತಿ ಮುಖ್ಯ ಅಂಗಗಳಲ್ಲಿ ಒಂದಾದ ನಾಲಿಗೆ ಕತ್ತರಿಸಿಕೊಂಡು ಪೆದ್ದುತನ ಮೆರೆದ ಘಟನೆ ಸಿರುಗುಪ್ಪ ತಾಲ್ಲೂಕು ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ವೀರೇಶ್ ಎಂಬ ಯುವಕ ಈ ಅಂಧ ಶ್ರದ್ಧೆ ಮೆರೆದವನು. ಹಾಲಿ ಈತ ತಾನು ಕತ್ತರಿಕೊಂಡ ನಾಲಿಗೆ ಸಮೇತ ವಿಮ್ಸ್ ವೈದ್ಯರ ಬಳಿ ಬಂದು ನಾಲಿಗೆ ಜೋಡಿಸಿ ಎಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಉಪ್ಪಾರ ಹೊಸಳ್ಳಿಯ ಆರಾಧ್ಯ ದೈವ ಶಂಕ್ರಪ್ಪ ತಾತಾನ ಒಲೈಸಿಕೊಳ್ಳಲು ಹೀಗೆ ನಾಲಗೆ ಕತ್ತರಿಸಿಕೊಂಡರೆ ಒಳಿತು ಎಂದು ಯಾರೋ ಹೇಳಿದ್ದನ್ನು ಕೇಳಿದ ಈ ಯುವಕ ನಾಲಗೆ ಕತ್ತರಿಸಿಕೊಂಡು ಮಾತು ಕಳೆದುಕೊಂಡು ಮೂಕನಾಗಿದ್ದಾನೆ.