ಹೈದರಾಬಾದ್: ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೆಲಂಗಾಣದಲ್ಲಿ ಪತನವಾಗಿದ್ದು ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
ದುಂಡಿಗಲ್ ಏರ್‌ಫೋರ್ಸ್ ಅಕಾಡೆಮಿಯಿಂದ ಹಾರಾಟ ಆರಂಭಿಸಿದ ಪೈಲಟಸ್ ಪಿಸಿ 7 ಎಂಕೆ-II ವಿಮಾನವು ರಾವೆಳ್ಳಿ ಗ್ರಾಮದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಒಬ್ಬ ಇನ್‌ಸ್ಟ್ರಕ್ಟರ್ ಪೈಲಟ್ ಹಾಗೂ ಒಬ್ಬ ಕೆಡೆಟ್ ಮೃತಪಟ್ಟಿದ್ದಾರೆ. “ದಿನ ನಿತ್ಯದ ಹಾರಾಟದ ಭಾಗವಾಗಿ ತರಬೇತಿ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ. ಯಾವುದೇ ಸಾರ್ವಜನಿಕರು ಮೃತಪಟ್ಟಿಲ್ಲ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಿಲ್ಲ” ಎಂದು ವಾಯುಪಡೆ ಮಾಹಿತಿ ನೀಡಿದೆ. ಗುಡ್ಡಗಾಡು ಪ್ರದೇಶದಲ್ಲಿ ವಾಯುಪಡೆ ವಿಮಾನ ಪತನವಾಗುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.