ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ತಂದೆಯೇ ಎದುರಿನಲ್ಲಿ ಯುವಕ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಉಣಕಲ್ ನಿವಾಸಿ ಪ್ರಶಾಂತ ಬಾರದ್ವಾಡ(21) ಉಣಕಲ್ ಕೆರೆಗೆ ಹಾರಿದ ಯುವಕ. ಕ್ಷುಲಕ ಕಾರಣಕ್ಕೆ ಯುವಕ ಓಡಿ ಹೋಗಿ ಕೆರೆಗೆ ಹಾರಿದ್ದಾನೆ ಎನ್ನಲಾಗಿದೆ. ಯುವಕನ ಹಿಂದೆಯೇ ತಂದೆ ಬೇಡ ಮಗನೆ ನಿಲ್ಲು ಎಂದು ಗೋಗರೆದು ಬೆನ್ನಟ್ಟಿದರೂ ಮಾತು ಕೇಳದೆ ಕೆರೆಗೆ ಹಾರಿದ್ದಾನೆ.