ಡಿಮ್ಹಾನ್ಸ್ ನಿರ್ದೇಶಕರ ವಿರುದ್ಧ ಜಾತಿನಿಂದನೆ ಪ್ರಕರಣ

ಡಿಮ್ಹಾನ್ಸ್
Advertisement

ಧಾರವಾಡ: ಡಿಮ್ಹಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ವಿರುದ್ಧ ಡಿಮ್ಹಾನ್ಸ್ ಪ್ರಾಧ್ಯಾಪಕ ಡಾ.ರಮೇಶಬಾಬು ಶಹರ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.
ನಾನು ಪರಿಶಿಷ್ಟ ಜಾತಿಗೆ ಸೇರಿದವನೆಂಬ ಕಾರಣಕ್ಕೆ ಡಾ.‌ಮಹೇಶ ದೇಸಾಯಿ ಅವರು ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು, ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಅಲ್ಲದೇ ಅನಗತ್ಯವಾಗಿ ವೇತನ ತಡೆಹಿಡಿಯುತ್ತಿದ್ದಾರೆ. ಸೇವಾ ಸೌಲಭ್ಯಗಳನ್ನು ನೀಡದೇ ತೊಂದರೆ ನೀಡುತ್ತಿದ್ದಾರೆ. ಅವರೊಂದಿಗೆ ಶಾಮೀಲಾಗಿ ಡಿಮ್ಹಾನ್ಸ್‌ನ‌ ಡಾ. ರಾಘವೇಂದ್ರ ನಾಯಕ ಕೂಡ ತೊಂದರೆ ನೀಡುತ್ತಿದ್ದಾರೆಂದು ಡಾ.ಮಹೇಶ ದೇಸಾಯಿ ಹಾಗೂ ಡಾ. ರಾಘವೇಂದ್ರ ನಾಯಕ ಅವರ ಮೇಲೆ ಡಾ. ರಮೇಶಬಾಬು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.