ಡಿಮಾನ್ಸ್‌ನಲ್ಲಿ ವಿಚಾರಣಾಧೀನ ಕೈದಿ ಸಾವು

ಆತ್ಮಹತ್ಯೆ
Advertisement

ಧಾರವಾಡ: ಡಿಮಾನ್ಸ್‌ನಲ್ಲಿ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಇಂಗಳಗುಂದಿ ಗ್ರಾಮದ ವಸಂತ ತಂಬಾಕದ(40) ಸಾವಿಗೀಡಾದ ಕೈದಿ. ಸುಮಾರು 17 ಕಳ್ಳತನ ಪ್ರಕರಣದಡಿ ವಸಂತನನ್ನು ಪೊಲೀಸರು ಬಂಧಿಸಿದ್ದರು. ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ವಸಂತಕುಮಾರ್ ಒಂದು ಪ್ರಕರಣಕ್ಕಾಗಿ ಕಾರಾಗೃಹದಲ್ಲಿ ಇದ್ದ.
ಯಲ್ಲಾಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಹಳಿಯಾಳ ಕಾರಾಗೃಹದಲ್ಲಿಟ್ಟಿದ್ದರು. ವಸಂತಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಮಾ. 6ರಂದು ಚಿಕಿತ್ಸೆಗೆಂದು ಧಾರವಾಡದ ಡಿಮಾನ್ಸ್‌ಗೆ ಕರೆದುಕೊಂಡು ಬಂದಿದ್ದರು. ವಸಂತ ಆಸ್ಪತ್ರೆಯಲ್ಲೇ ಅಸುನೀಗಿದ್ದಾನೆ ಎಂದು ಮೂಲಗಳು ತಿಳಿಸಿವೆ.