ಡಿಕೆಶಿ ನಿವಾಸ ಮೇಲೆ ಸಿಬಿಐ ದಾಳಿ

D K ಶಿವಕುಮಾರ
Advertisement

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರು ದೊಡ್ಡ ಆಲಹಳ್ಳಿ ಸೇರಿದಂತೆ ನಾಲ್ಕೈದು ಕಡೆ ದಾಳಿ ನಡೆಸಿ ದಾಖಲಾತಿ ಪರಿಶೀಲಿಸಿದ್ದಾರೆ.
ಕನಕಪುರ ತಹಸೀಲ್ದಾರ್ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶಿವಕುಮಾರ್ ಅವರ ದೊಡ್ಡ ಆಲಹಳ್ಳಿ ಮನೆ, ಕನಕಪುರ ಪಟ್ಟಣದಲ್ಲಿರುವ ನಿವಾಸ ಹಾಗೂ ಕೋಡಿಹಳ್ಳಿ ಗ್ರಾಮದ ಮನೆಗಳಿಗೆ ತೆರಳಿ ಸಿಬಿಐ ಅಧಿಕಾರಿಗಳು ಸುಮಾರು ಒಂದೂವರೆ ಗಂಟೆ ಕಾಲ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ಜಮೀನು ಮತ್ತಿತರ ಆಸ್ತಿ ಸಂಬಂಧಿತ ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ಪರಿಶೀ ಲನೆ ಮಾಡಿ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಅಲ್ಲದೆ ಡಿಕೆಶಿ ಅವರು ಸಂಬಂಧಿಕರ ಆಸ್ತಿಪಾಸ್ತಿಗಳ ಕುರಿತೂ ಸಿಬಿಐ ಅಧಿಕಾರಿಗಳು ಮನೆಯವರಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಅಗತ್ಯವಿಲ್ಲಿ ಮತ್ತೆ ಬರುವುದಾಗಿ ತಿಳಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿಯೇ ತೆರಳಿದ್ದಾಗಿ ವರದಿಯಾಗಿದೆ