ಟೆಕ್ಸ್ ಟೈಲ್‌ನಲ್ಲಿ ಅಗ್ನಿ ಅವಘಡ: ಅಪಾರ ಹಾನಿ

Advertisement

ಬೆಳಗಾವಿ ಜಿಲ್ಲೆಯ ಸದಗಲಾದಲ್ಲಿನ ಶ್ರೀ ಗಣೇಶ್ ಟೆಕ್ಸ್ ಟೈಲ್ ನಲ್ಲಿಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿತು. ಏಕಾಏಕಿ ಬೆಂಕಿ ವ್ಯಾಪಿಸಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿತು.
ಘಟನೆಯಲ್ಲಿ 9 ಪವರ್ ಲೂಮ್ ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳು ಸುಟ್ಟಿವೆ. ಈ ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದಲಗಾ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.