ಟೀಂ ಇಂಡಿಯಾಗೆ ಮರಳಿದ ಸ್ಪೀಡ್ ಬೌಲರ್ ಜಸ್ಪ್ರೀತ್ ಬುಮ್ರಾ!

Advertisement

ಟಿ20 ವಿಶ್ವಕಪ್ 2022 ರಲ್ಲಿ ಟೀಂ ಇಂಡಿಯಾ ಬಗ್ಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಟೀಂ ಇಂಡಿಯಾದ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿ ಟಿ20 ವಿಶ್ವಕಪ್ ಮರಳಲಿದ್ದಾನೆ. ಏಷ್ಯಾ ಕಪ್ 2022 ರಂತಹ ಪಂದ್ಯಾವಳಿಗಳಲ್ಲಿ, ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್ ಕೊರತೆ ಅನುಭವಿಸುತ್ತಿತ್ತು, ಆದರೆ ತಂಡಕ್ಕೆ ಬುಮ್ರಾ ಮರಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಆದ್ರೆ, ಬುಮ್ರಾ ಆಗಮನದಿಂದ ಈ ಆಟಗಾರನ ಟಿ20 ವಿಶ್ವಕಪ್ ಆಡುವ ಕನಸು ಭಗ್ನವಾಗಲಿದೆ. ಹಾಗಿದ್ರೆ, ಯಾರ ಸ್ಥಾನಕ್ಕೆ ಆ ಆಟಗಾರನ ಎಂಟ್ರಿಯಾಗಲಿದೆ.