ಟಾವರ್ ಏರಿದ ಕಾರ್ಮಿಕ

Advertisement

ಧಾರವಾಡ: ಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ್ಯುಬಿಲಿ ವೃತ್ತದಲ್ಲಿ ಜಲಮಂಡಳಿ ಕಾರ್ಮಿಕನೋರ್ವ ಮೊಬೈಲ್ ಟಾವರ್ ಏರಿದ ಘಟನೆ‌ ಶುಕ್ರವಾರ ನಡೆದಿದೆ.
ಟಾವರ್ ಕೆಳಗೆ ಉಳಿದ ಕಾರ್ಮಿಕರಿಂದ ಪ್ರತಿಭಟನೆ ನಡೆಸಲಾಯಿತು. ಕಳೆದ ೮ ತಿಂಗಳ ಸಂಬಳವಿಲ್ಲದೇ ಕೆಲಸಕ್ಕೆ ಹಾಜರು ಆಗದೇ ಇರುವ ಜಲ ಮಂಡಳಿ ಕಾರ್ಮಿಕರು ವಿವಿಧ ಬಗೆಯಲ್ಲಿ ಪ್ರತಿಭಟನೆ‌ ನಡೆಸಿದರೂ ಅದಕ್ಕೆ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು.
ಇದೇ ಟಾವರ್ ಮೇಲೆ ಕಳೆದ ೧೫ ದಿನಗಳ ಹಿಂದೆ ಕಳ್ಳನೊಬ್ಬ ಏರಿದ್ದ ಇಂದು ಜಲ ಮಂಡಳಿ ಕಾರ್ಮಿಕನಿಂದ ಟಾವರ್ ಏರಿ ಪ್ರತಿಭಟನೆ ನಡೆಸಲಾಯಿತು.