ಹುಬ್ಬಳ್ಳಿ: 17 ಹಾಗೂ 18ನೇ ಶತಮಾನದಲ್ಲಿ ಭೂಮಿ ಇದ್ದವರು ಜಗತ್ತು ಆಳಿದ್ದಾರೆ. 20ನೇ ಶತಮಾನದಲ್ಲಿ ಹಣವಿದ್ದವರು ಜಗತ್ತು ಆಳಿದ್ದಾರೆ. ಆದರೆ, 21ನೇ ಶತಮಾನವನ್ನು ಜ್ಞಾನವಿದ್ದವರು ಆಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕುಸಗಲ್ ರಸ್ತೆಯ ಮುನಿಸುವಾರ್ತ ದೇವಸ್ಥಾನದ ಮುಂಭಾಗದಲ್ಲಿ ಅಜಿತ ಸಾಹಿತ್ಯ ಮಹೋತ್ಸವ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಆಚಾರ್ಯ ಅಜಿತಶೇಖರ ಸುರೀಶ್ವರ ಮಹಾರಾಜರ 100ನೇ ಪುಸ್ತಕ ರಿಫ್ರೆಶ್ ಯುವರ್ ಮೈಂಡ್ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಭಾರತ ದೇಶದ ಇತಿಹಾಸದಲ್ಲಿ ಒಬ್ಬ ಶ್ರೀಗಳು 100 ಪುಸ್ತಕಗಳನ್ನು ಬರೆದಿರುವುದು ಅತ್ಯಂತ ವಿರಳ. ನಾವೆಲ್ಲರೂ ಶ್ರೀಗಳು ಬರೆದ ಪುಸ್ತಕಗಳನ್ನು ಓದಬೇಕು. ರಿಫ್ರೆಶ್ ಯುವರ್ ಮೈಂಡ್ ಪುಸ್ತಕ ಇಂದಿನ ಸಮಾಜದ ಜನರಿಗೆ ಅತ್ಯುಪಯುಕ್ತವಾಗಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ, ಮೇಯರ್ ಈರೇಶ ಅಂಚಟಗೇರಿ, ಭವರಲಾಲ್ ಜೈನ್, ಮಹೇಂದ್ರ ಸಿಂಘಿ ಇತರರು ಇದ್ದರು.