ಪಂಜಾಬ್: 10ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್‌ಸಿಂಗ್ ಸಿಧು ಇಂದು ಬಿಡುಗಡೆಯಾದರು.
1988ರಲ್ಲಿ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಸಿಧು ಅಪರಾಧಿ ಎಂದು ಪಂಜಾಬ್ ಕೋಟ್ ತೀರ್ಪು ನೀಡಿತ್ತು. ಬಳಿಕ ಸಿಧು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪಂಜಾಬ್ ಕೋರ್ಟ್‌ನ ತೀರ್ಪು ಎತ್ತಿ ಹಿಡಿದಿತ್ತು. ಮೇ 19, 2022ರಂದು ತೀರ್ಪು ಪ್ರಕಟವಾದ ಬೆನ್ನಲ್ಲೇ ಪಟಿಯಾಲ ಪೊಲೀಸರು ಅವರನ್ನು ಬಂಧಿಸಿದ್ದರು.
ಸಿಧು ಅವರ ಬಿಡುಗಡೆಯು ಮೇ ತಿಂಗಳಲ್ಲಿ ನಿಗದಿಯಾಗಿತ್ತು, ಆದರೆ ಉತ್ತಮ ನಡವಳಿಕೆಯನ್ನು ಹೊಂದಿರುವ ಎಲ್ಲಾ ಕೈದಿಗಳಿಗೆ, ಎಲ್ಲಾ ಭಾನುವಾರದ ರಜಾದಿನಗಳನ್ನು ಶಿಕ್ಷೆಯ ಅವಧಿಯಿಂದ ಕಡಿತಗೊಳಿಸಿರುವುದರಿಂದ ಸಿಧು ಅವರು 48 ದಿನಗಳ ಪರಿಹಾರವನ್ನು ಪಡೆಯುತ್ತಿದ್ದಾರೆ ಎಂದು ಅವರ ವಕೀಲ ಎಚ್‍ಪಿಎಸ್ ವರ್ಮಾ ತಿಳಿಸಿದ್ದಾರೆ.