ಜೆಡಿಎಸ್, ಕೈ ವಿರುದ್ಧ ಶಾ ವಾಗ್ದಾಳಿ

Advertisement

ಹುಬ್ಬಳ್ಳಿ: ಕರ್ನಾಟಕ ರಾಜ್ಯದಲ್ಲಿ ಎರಡು ಭ್ರಷ್ಟಾಚಾರಿ ಪಕ್ಷಗಳಿವೆ. ಒಂದು ಕುಟುಂಬ ರಾಜಕಾರಣ ಮಾಡುವ ಜೆಡಿಎಸ್ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು.
ಶನಿವಾರ ಕುಂದಗೋಳ ಪಟ್ಟಣದಲ್ಲಿ ರೋಡ್ ಶೋ ಮಾಡಿ, ಬಹಿರಂಗ ಭಾಷಣ ಮಾಡಿದ ಅವರು, ರಾಜ್ಯದಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸಿದ್ದರಾಮಯ್ಯ ದೆಹಲಿಗೆ ಪೇಟಿಎಂ ಮಾಡಿದರು ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಇಡೀ ರಾಜ್ಯದ ವ್ಯವಸ್ಥೆಯನ್ನ ಹಾಳು ಮಾಡಿದ್ದಾರೆ. ಕಾಂಗ್ರೆಸ್ ಗಾಂಧಿ ಪರಿವಾರಕ್ಕೆ ಮಾತ್ರ ಸಿಮೀತವಾಗಿದೆ. ಇನ್ನೂ ಜೆಡಿಎಸ್ ಕುಟುಂಬ ಪಕ್ಷವಾಗಿದೆ. ತಾತ, ತಂದೆ, ಮಗ, ಮೊಮ್ಮಗ, ಸೊಸೆ, ಮಗಳ ಪಕ್ಷವಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗೆ ಒಳ್ಳೆಯದು ಮಾಡಿದ್ದಾರೆಯೋ ಇಲ್ಲವೋ ನೀವೇ ಹೇಳಬೇಕು. ರಾಜ್ಯಕ್ಕೆ ಮೋದಿ ಮಹದಾಯಿ ನೀರು ಕೊಟ್ಟಿದ್ದಾರೋ ಇಲ್ಲವೋ, ಲಕ್ಷ ಲಕ್ಷ ಜನರಿಗೆ ಶೌಚಾಲಯ ಮಾಡಿಕೊಟ್ಟಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಭಯೋತ್ಪಾದನೆ ನಿಗ್ರಹ ಮಾಡಿ ದೇಶಕ್ಕೆ ರಕ್ಷಣೆ ನೀಡಿದೆ. ಮೋದಿ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಭುವಿನ ದೇವಾಲಯ ಮಾಡಿದ್ದಾರೆ ಎಂದರು.
ಪರಿವಾರವಾದಿಗಳನ್ನ, ಭ್ರಷ್ಟಾಚಾರವಾದಿಗಳನ್ನು ದೂರ ಇಡೋಣ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ ಎಂದರು.