ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಳಗಾವಿ
Advertisement

ಬೆಳಗಾವಿ: ಮೂವರು ಮಕ್ಕಳಿಗೆ ಪಿನೈಲ್‌ ಕುಡಿಸಿದ ತಾಯಿ ತಾನೂ ಕುಡಿದು ಆತ್ನಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಇಲ್ಲಿಯ ಅನಗೋಳ ನಿವಾಸಿ ಎನ್ನಲಾದ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ(40) ಮತ್ತು ಈಕೆಯ ಮಕ್ಕಳಾದ ಸೃಷ್ಟಿ(14), ಸಾಕ್ಷಿ(8) ಮತ್ತು ಸಾನ್ವಿ(3) ಪಿನೈಲ್‌ ಕುಡಿದು ಅಸ್ವಸ್ಥಗೊಂಡಿದ್ದಾರೆ.
ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸರಸ್ವತಿಯ ಪತಿ ಅದೃಶ್ಯಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳದಿಂದ ಕೆಲ ದಿನಗಳ ಹಿಂದೆ ಮನೆ ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಸರಸ್ವತಿ ಅವರಿಗೆ ಸಾಲಗಾರರ ಕಿರುಕುಳ ಉಂಟಾಗಿತ್ತು. ಅಲ್ಲದೇ ಮನೆಯಲ್ಲಿ ಮಕ್ಕಳು ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿತ್ತು. ಇದರಿಂದ ಬೇಸತ್ತ ಸರಸ್ವತಿ ಸಹಾಯ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಲಿಲ್ಲ ಈ ಸಂದರ್ಭದಲ್ಲಿ ಕಾಯುತ್ತ ಕುಳಿತಿದ್ದ ವೇಳೆ ಮಕ್ಕಳು ಅಸ್ವಸ್ಥಗೊಂಡು ವಾಂತಿ ಮಾಡತೊಡಗಿದ್ದಾರೆ. ಆಗ ಎಚ್ಚೆತ್ತುಕೊಂಡ ಸಿಬ್ಬಂದಿ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.