ಕಲಬುರಗಿ ನಗರದ ಯಾದುಲ್ಲಾ ಕಾಲೋನಿಯಲ್ಲಿ ಜಿಂಕೆಮರಿ ಹಾಗೂ ನವಿಲುಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ರೋಜಾ ಠಾಣೆ ಪೊಲೀಸರು, ರೌಡಿ ನಿಗ್ರಹ ದಳ ಪಡೆ ಹಾಗೂ ಅರಣ್ಯ ಪೊಲೀಸ್ ವಿಭಾಗದಿಂದ ಏಕಕಾಲಕ್ಕೆ ದಾಳಿ ನಡೆಸಿ ಒಂದು ಬೊಲೆರೊ, ಐದು ಜಿಂಕೆ ಮರಿ ಮಾಂಸ, ಒಂದು ನವಿಲಿನ ಮಾಂಸ, ಎರಡು ರೈಫಲ್, ಏರ್ ಗನ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಉಪವಿಭಾಗದ ಡಿಸಿಪಿ ದೀಪನ ನೇತೃತ್ವದಲ್ಲಿ ಜಂಟಿಯಾಗಿ ದಾಳಿ ನಡೆಸಿ ಈ ಪ್ರಕರಣ ಬೇಧಿಸಿದ್ದಾರೆ.