ಜನರ ಜೀವದೊಂದಿಗೆ ಚೆಲ್ಲಾಟವಾಡಲು ರಾಜಕೀಯ ಮಾಡುತ್ತಿಲ್ಲ

Advertisement

ವಿಜಯಪುರ(ಮುದ್ದೇಬಿಹಾಳ): ನಾನು ರಾಜಕಾರಣ ಮಾಡೋದು ಶೋಕಿಗಾಗಿ, ಡಂಬಾಚಾರಕ್ಕಾಗಿ, ಜನರ ಜೀವದೊಂದಿಗೆ ಚೆಲ್ಲಾಟವಾಡಲು ಅಲ್ಲ. ಮಾಜಿ ಮುಖ್ಯಮಂತ್ರಿಯಾಗಿದ್ದೇನೆ ಹಾಗಿಯೇ ಮಣ್ಣಲ್ಲಿ ಸೇರೋದು. ನಾನು ಗಳಿಸಿದ್ದು ಕೇವಲ ನಿಮ್ಮ ಪ್ರೀತಿ. ಒಂದು ಬಾರಿ ನನಗೆ ಸಂಪೂರ್ಣ ಅಧಿಕಾರ ಕೊಟ್ಟು ನೋಡಿ ಮನೆಗಳಿಲ್ಲದವರಿಗೆ ಮನೆ ಕಟ್ಟಿ ಕೊಡುವೆ. ರೈತರು ಸಾಲಗಾರರಾಗದ ರೀತಿಯಲ್ಲಿ ಅಧಿಕಾರ ನಡೆಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜನತೆಯ ಬದುಕನ್ನು ಕಟ್ಟಲ್ಲ ಮತ್ತು ಆಶ್ರಯನೂ ಆಗಲ್ಲ ಬದಲಾಗಿ ನಿಮ್ಮನ್ನ ಲೂಟಿ ಮಾಡುವ ಪಕ್ಷಗಳಾಗಿವೆ. ನಾನು ೨೦೦೬ರಲ್ಲಿ ಸಾಲ ಮನ್ನಾ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆದ ಕಬ್ಬು ಕಾರ್ಖಾನೆಯವರು ತೆಗೆದುಕೊಂಡು ಹೋಗದೆ ಇದ್ದಾಗ ೨೩೮ ಕೋಟಿ ರೂ.ಗಳ ಪರಿಹಾರವನ್ನು ಪ್ರತಿ ಹೆಕ್ಟೆರ್‌ಗೆ ೨೫ ಸಾವಿರದಂತೆ ಕಬ್ಬು ಬೆಳೆಗಾರರಿಗೆ ಪರಿಹಾರ ಕೊಟ್ಟಿದ್ದೇನೆ ಎಂದರು.