ಜಂತಿ ಮನೆಗೆ ಆಕಸ್ಮಿಕ ಬೆಂಕಿ

KUSTAGI
Advertisement

ಕುಷ್ಟಗಿ: ತಾಲೂಕಿನ ಚಳಗೇರಾ ಗ್ರಾಮದ ಶರಣಪ್ಪ ಬಾರಕೇರ ಅವರ ಮಣ್ಣಿನ (ಜಂತಿನ ಮನೆ) ಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯು ಸುಟ್ಟು ಭಸ್ಮವಾದ ಘಟನೆ ಜರುಗಿದೆ.
ತಾಲೂಕಿನ ಚಳಗೇರಾ ಗ್ರಾಮದ ಶರಣಪ್ಪ ಬಾರಕೇರ ಅವರ ಮಣ್ಣಿನ ಮನೆಗೆ (ಜಂತಿನ ಮನೆ) ಯು ಆಕಸ್ಮಿಕ ಬೆಂಕಿ ತಗುಲಿದ್ದು ಇದರಿಂದಾಗಿ ಬೆಂಕಿಯು ಸಂಪೂರ್ಣವಾಗಿ ಮನೆಯನ್ನು ಆವರಿಸಿದ್ದು ಇದರಿಂದ ಗ್ರಾಮಸ್ಥರು ಬೆಂಕಿಯನ್ನ ಆರಿಸುವಲ್ಲಿ ಮುಂದಾಗಿದ್ದಾರೆ.
ಮನೆಗೆ ಬೆಂಕಿಯ ಧಗಧಗನೆ ಉರಿಯುತ್ತಿದ್ದಂತೆ ಭಯಗೊಂಡ ಮನೆಯ ಮಾಲಿಕ ಶರಣಪ್ಪ ಬಾರಕೇರ ಅವರು ಕೂಡಲೇ ಅಗ್ನಿಶಾಮಕ ಠಾಣೆಯ ಅಧಿಕಾರಿ ಪಿ ರಾಜು ಅವರಿಗೆ ದೂರವಾಣಿ ಕೆರೆ ಮಾಡಿ ತಿಳಿಸುತ್ತದಂತೆ ವಾಹನ ಸಮೇತ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ಅಕ್ಕಪಕ್ಕದ ಮನೆಗೆ ಬೆಂಕಿ ತಗುಲುವ ಮೊದಲೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಮನೆಯಲ್ಲಿ ಇದ್ದಂತಹ ಸಿಲಿಂಡರ್, ಬೆಂಕಿಯು ಹತ್ತಿಕೊಂಡಿದ್ದು ಜೀವದ ಹಂಗು ತೊರೆದು ಅಗ್ನಿಶಾಮಕ ಅಧಿಖಾರಿಗಳು ಮನೆಯೊಳಗೆ ತೆರಳಿ ಇದ್ದತಹ ಸಿಲಿಂಡರನ್ನು ಹೊರಗಡೆ ತೆಗೆದು ಅನಾಹಹುತ ಆಗುವದ್ನು ತಡೆದಿದದಾರೆ ಎಂದು ಶರಣಪ್ಪ ಬಾರಕೇರ, ಗ್ರಾಮಸ್ಥರಾದ ಚನ್ನಸಂಗನಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಆತಂಕದ ವಾತವಾರಣ: ಶರಣಪ್ಪ ಬಾರಕೇರ ಅವರ ಮನೆಗೆ ಬೆಂಕಿ ತಗುಲಿರುವದನ್ನು ಕಂಡು ಗ್ರಾಮಸ್ಥರು ಏನಾದರೂ ಅನಾಹುತ ಆಗುತ್ತೊ ಎಂಬ ಆತಂಕದಲ್ಲಿದ್ದರು. ಗ್ರಾಮದಲ್ಲಿ ಆತಂಕದ ವಾತಾವರಣ ಕಂಡುಬಂತು.
ನಂತರ ಅಗ್ನಿಶಾಮಕ ಠಾಣಾಧಿಕಾರಿ ಪಿ ರಾಜು ಮಾತನಾಡಿ ಬೆಂಕಿಗೆ ಸಂಪೂರ್ಣವಾಗಿ ಮನೆಯ ಮೇಲಚ್ವಾವಣಿ ಅಳವಡಿಸಲಾಗಿದ್ದ ಕಟ್ಟಿಗೆಗಗಳು ಬೆಂಕಿಯಲ್ಲಿ ಸುಟ್ಟುಹೋಗಿದ್ದು ಸಕಾಲದಲ್ಲಿ ಅಗ್ನಿಶಾಮಕ ಠಾಣಾ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಯಾವುದೆ ಅನಾಹುತ, ಜೀವಹಾನಿ ಸಂಭವ ಆಗಿರುವದಿಲ್ಲ ಎಂದು ಮಾಹಿತಿ ನೀಡಿದರು.