ಚೌಧರಿ ಕ್ರೀಡಾಂಗಣದಲ್ಲಿ ಇಶಾನ್‌ ಕಿಶನ್‌ ದ್ವಿಶತಕದ ಸಂಭ್ರಮ

Advertisement

ಬಾಂಗ್ಲಾದೇಶದ ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಸ್ಫೋಟಕ ಬ್ಯಾಟರ್‌ ಇಶಾನ್ ಕಿಶನ್‌ 131 ಎಸೆತಗಳಲ್ಲಿ 210 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಏಕದಿನದ ಪಂದ್ಯದಲ್ಲಿ ತನ್ನ ಮೊದಲನೇ ಶತಕವನ್ನೇ ದ್ವಿಶತಕವಾಗಿಸಿದ ಮೊದಲನೇ ಆಟಗಾರ ಎಂಬ ಹೆಗ್ಗಳಿಕೆ ಭಾಜನರಾಗಿದ್ದಾರೆ. ಅಲ್ಲದೇ ಏಕದಿನದ ಪಂದ್ಯದಲ್ಲಿ ದ್ವಿಶಕತಕ ಗಳಿಸಿದ ಭಾರತದ ನಾಲ್ಕನೇ ಆಟಗಾರನಾಗಿದ್ದಾರೆ.
ಮೊದಲ ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ಭಾರತ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಬೇಗನೆ ಕಳೆದುಕೊಂಡಿತು. ಇನ್ನೊಂದು ಬದಿಯಲ್ಲಿದ್ದ ಇಶಾನ್‌ ಕಿಶನ್‌ ಅವರನ್ನು ವಿರಾಟ್ಗ್‌ ಕೊಹ್ಲಿ ಸೇರಿಕೊಂಡು ತಂಡದ ಮೊತ್ತವನ್ನು ಹೆಚ್ಚಿಸುತ್ತಾ ನಡೆದರು. ವಿಶೇಷವಾಗಿ ಇಶಾನ್‌ ಕಿಶನ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ, ರನ್‌ಗಳ ಸುರಿಮಳೆಗೈದು ತಂಡದ ಮೊತ್ತವನ್ನು ತ್ವರಿತವಾಗಿ ಹೆಚ್ಚಿಸುತ್ತಾ ನಡೆದರು. 85 ಎಸೆತಗಳಲ್ಲಿ ಚೊಚ್ಚಲ ಏಕದಿನ ಕ್ರಿಕೆಟ್‌ ಶತಕ ಪೂರೈಸಿದ ಇಶಾನ್‌ 126 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಅಂತಿಮವಾಗಿ 131 ಎಸೆತಗಳನ್ನು ಎದುರಿಸಿ 210 ರನ್‌ ಮಾಡಿ ತಸ್ಕಿನ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಇದರಲ್ಲಿ 24 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳು ಸೇರಿವೆ.