ಚೀನಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ದೃಢ

Advertisement

ಬೆಂಗಳೂರು: ಹೈ ರಿಸ್ಕ್‌ ದೇಶಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರ ಪೈಕಿ 9 ಜನರಿಗೆ ಕೊರೊನಾ ದೃಢಪಟ್ಟ ಬಗ್ಗೆ ವರದಿಯಾಗಿದೆ. ಇವರ ಸ್ಯಾಂಪಲ್‌ಗಳನ್ನು ಜಿನೋಮಿಕ್‌ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ.
ಈ ಪೈಕಿ ಚೀನಾದಿಂದ ಬಂದಿದ್ದ 35 ವರ್ಷದ ವ್ಯಕ್ತಿ ಕೂಡಾ ಸೇರಿದ್ದಾನೆ. 9 ಜನರ ಪೈಕಿ ಐವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದ್ದು, ನಾಲ್ವರನ್ನು ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರೆಲ್ಲರೂ ಡಿಸೆಂಬರ್‌ 24 ರಂದು ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ.