ನಿಜವಾದ ನಾಯಕ ಸೋತ ಕ್ಷೇತ್ರದಿಂದಲೇ ಗೆದ್ದು ಬರಬೇಕು. ಸಿದ್ದರಾಮಯ್ಯ ಕೋಲಾರಕ್ಕೆ ಹೋಗದೇ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಗೆದ್ದು ಜನನಾಯಕ ಎಂದು ಗುರುತಿಸಿಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ನಿಲ್ತಾರೋ ನಮಗೆ ಬೇಕಿಲ್ಲ. ಆದರೆ ಗೆದ್ದ ಸ್ಥಳದಲ್ಲೇ ಮರು ಚುನಾವಣೆಗೆ ನಿಂತರೆ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದಾರೋ ಇಲ್ವೋ ಗೊತ್ತಾಗುತ್ತೆ. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ನಿಂತು ಗೆದ್ದು ಬರಲಿ ಎಂದರು.