ಹುಬ್ಬಳ್ಳಿ: ಇಲ್ಲಿನ ಕಸಬಾ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಹುಬ್ಬಳ್ಳಿ ದುರ್ಗದ ಬಯಲ ಸರ್ಕಲ್ನಲ್ಲಿ ಸಂತೋಷ ಮುರಗೋಡ ಎಂಬ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ.
ರಾತ್ರಿ 9.30ರ ಹೊತ್ತಿಗೆ ಘಟನೆ ನಡೆದಿದ್ದು, ಚಾಕು ಇರಿತದಲ್ಲಿ ಗಾಯಗೊಂಡ ಸಂತೋಷನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಈತನಿಗೆ ಚಾಕು ಇರಿದ ಆರೋಪಿಗಳು ನಾಪತ್ತೆಯಾಗಿದ್ದು, ಚಾಕು ಇರಿತಕ್ಕೆ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.