ಚಲಿಸುವ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ವಿಜಯಪುರ
Advertisement

ವಿಜಯಪುರ : ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಗಣೇಶ ನಗರದ ಬಳಿ ಹಾದು ಹೋಗಿರುವ ರೈಲ್ವೆ ಹಳಿ ಮೇಲೆ ತಲೆ ಇಟ್ಟು ಗಡಗಿ ಲೇಔಟ್ ನಿವಾಸಿ ಗುರುರಾಜ ಪುರೋಹಿತ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ – ಗದಗ ರೈಲ್ವೆ ಮಾರ್ಗದಲ್ಲಿ ದುರ್ಘಟನೆ ನಡೆದಿದ್ದು, ಆತ್ಮ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.