ಚರ್ಚೆಗೆ ನಮ್ಮ ಸರಕಾರ ಸಿದ್ಧ

Advertisement

ನವದೆಹಲಿ: ಎಲ್ಲಾ ವಿಚಾರಗಳ ಕುರಿತು ಸೂಕ್ತವಾದ ಚರ್ಚೆಗೆ ನಮ್ಮ ಸರಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುವ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ನಡೆಸಲಾಯಿತು. ಒಟ್ಟು 23 ಪಕ್ಷಗಳ 30 ನಾಯಕರು ಸಭೆಯಲ್ಲಿ ಪಾಲ್ಗೊಂಡು ಅನೇಕ ವಿಚಾರಗಳ ಕುರಿತು ಚರ್ಚಿಸಿದರು. ಒಟ್ಟು 19 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ 15 ಸಭೆ ನಡೆಯಲಿದೆ ಮತ್ತು ಎಲ್ಲಾ ವಿಚಾರಗಳ ಕುರಿತು ಸೂಕ್ತವಾದ ಚರ್ಚೆಗೆ ನಮ್ಮ ಸರಕಾರ ಸಿದ್ಧವಿದೆ ಎಂದರು.